ಕಲಾಕ್ಷೇತ್ರ: ಯಕ್ಷಗಾನ ಸಪ್ತಾಹ ಸಮಾರೋಪ

0
13

ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ ಅಮೃತ ಮಹೋತ್ಸವದ ಪ್ರಯುಕ್ತ ನಡೆದ ಯಕ್ಷಗಾನ ಸಪ್ತಾಹ ದ ಸಮಾರೋಪ ಸಮಾರಂಭ ರಾಜಾಂಗಣದಲ್ಲಿ ಪರ್ಯಾಯ ಶ್ರೀ ವೇದವರ್ಧನ ಶ್ರೀಪಾದರ ಉಪಸ್ಥಿತಿ ಯಲ್ಲಿ ನಡೆಯಿತು.

ಆಶೀರ್ವಚನ ನೀಡಿದ ಪರ್ಯಾಯ ಶ್ರೀ ಗಳು ಯಕ್ಷಗಾನ ಕಲಾಕ್ಷೇತ್ರ ದ ಸ್ಥಾಪಕರು ಹಾಗೂ ಎಪ್ಪತ್ತೈದು ವರ್ಷಗಳ ಕಾಲ ಸೇವೆ ಸಲ್ಲಿಸಿದ ಎಲ್ಲರನ್ನೂ ಸ್ಮರಿಸುವ ಸಂದರ್ಭ ಇದಾಗಿದೆ, ಕೃಷ್ಣ ನಗರಿ ಉಡುಪಿ ಯ ಹಿರಿಯ ಯಕ್ಷಗಾನ ಸಂಸ್ಥೆ ತನ್ನ ಅಮೃತ ಮಹೋತ್ಸವ ವನ್ನು ರಾಜಾಂಗಣ ದಲ್ಲಿ ಸಪ್ತಾಹ ಕಾರ್ಯಕ್ರಮ ಗಳನ್ನು ನಡೆಸುವುದರ ಮೂಲಕ ಶ್ರೀಕೃಷ್ಣ ಮುಖ್ಯಪ್ರಾಣರ ಅನುಗ್ರಹಕ್ಕೆ ಪಾತ್ರವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಯಕ್ಷಗಾನ ವಿಮರ್ಶಕ ಫ್ರೊ ಉದಯ ಕುಮಾರ್ ಶೆಟ್ಟಿ, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಹಿರಿಯ ಟಿ ವಿ ಪತ್ರಕರ್ತ ರಾದ ಪೆರ್ಲತ್ತಾಯ ಡಾ. ಸುದರ್ಶನ್ ಭಾರತೀಯ ಭಾಗವಹಿಸಿದ್ದರು, ಸಭಾಧ್ಯಕ್ಷತೆಯನ್ನು ಕೇಶವ ಮೂರ್ತಿ ಬೆಲ್ಪತ್ರೆ ವಹಿಸಿದ್ದರು.

ವಿಷ್ಣುಮೂರ್ತಿ ಉಪಾಧ್ಯ ಮಾರ್ಪಳ್ಳಿ ನಿರೂಪಿಸಿದರು, ನಿಕಟ ಪೂರ್ವ ಅಧ್ಯಕ್ಷ ಜಿ, ಬಾಬು ಗೌಡ, ಉಪಾಧ್ಯಕ್ಷ ನಿಟ್ಟೂರು ಮಹಾಬಲ ಶೆಟ್ಟಿ ಹಿರಿಯ ಸದಸ್ಯರಾದ ನಾಗರಾಜ್ ಉಪಾಧ್ಯ ಮಾರ್ಪಳ್ಳಿ, ಡಾ. ರಮೇಶ್ ಚಿಂಬಾಲ್ಕರ್,ಕಾರ್ಯದರ್ಶಿ ಗಣೇಶ್ ಕೋಟ್ಯಾನ್,ಕೋಶಾಧಿಕಾರಿ ನರಸಿಂಹ ಎನ್ ಆರ್, ಕಲಾಕಾರ್ಯದರ್ಶಿ ಶ್ರೀಧರ್ ಭಟ್, ರಮೇಶ್ ಕೋಟ್ಯಾನ್, ಅನಿಲ್ ಕುಮಾರ್ ಅಡೂರು, ಮೋಹನ್ ಪೂಜಾರಿ ಕಟಪಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here