ಡಾ ಶತಾವಧಾನಿ ಉಡುಪಿ ರಾಮನಾಥ ಆಚಾರ್ಯರಿಂದ ಭಾರತ ಪಾದಯಾತ್ರಾ ಪ್ರದಕ್ಷಿಣೆ – ಪುತ್ತಿಗೆ ಶ್ರೀಗಳಿಂದ ಚಾಲನೆ

0
8

ಸಮಗ್ರ ಭಾರತ ಕ್ಷೇತ್ರವನ್ನು ಭಗವಂತನ ವಿಭೂತಿರೂಪವನ್ನಾಗಿ ಪರಿಗಣಿಸಿ ಪ್ರದಕ್ಷಿಣಾರೂಪದಲ್ಲಿ ಪಾದಯಾತ್ರೆಯೊಂದಿಗೆ ಶ್ರೀಯುತ ರಾಮನಾಥ ಆಚಾರ್ಯರು ಯಾತ್ರೆಯನ್ನು ನಡೆಸುತ್ತಿರುವರು. ಇದರೊಂದಿಗೆ ಪುತ್ತಿಗೆ ಶ್ರೀಪಾದರ ವಿಶ್ವಗೀತಾಪರ್ಯಾಯದ ಕೋಟಿಗೀತಾಲೇಖನಯಜ್ಞ ಪ್ರಚಾರವನ್ನೂ ಎಲ್ಲೆಡೆ ನಡೆಸುವರು.

ಶ್ರೀಪುತ್ತಿಗೆ ವಿದ್ಯಾಪೀಠದ ಈರ್ವರು ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಶಾಸ್ತ್ರಪಾಠವನ್ನು ನಡೆಸುವರು. ಪೂಜ್ಯ ಪುತ್ತಿಗೆ ಶ್ರೀಪಾದರು ಶ್ರೀಮಠದ ಕೋಟಿಗೀತಾಲೇಖನಯಜ್ಞ ಪ್ರಚಾರದ ವಾಹನವನ್ನು ಆಚಾರ್ಯರಿಗೆ ಹಸ್ತಾಂತರಿಸುವ ಮೂಲಕ ಮೇ 18ರಂದು ಭಾರತ ಪ್ರದಕ್ಷಿಣೆ ಕಾರ್ಯಕ್ರಮ ಚಾಲನೆಗೊಂಡಿತು.

ಪ್ರತಿದಿನ ಮುಂಜಾನೆ ಹಾಗೂ ಮುಸ್ಸಂಜೆ ನಡೆಸುವ ಈ ಪಾದಯಾತ್ರೆ ದಿನಕ್ಕೆ 25 ಕಿ.ಮೀ. ಲೆಕ್ಕದಲ್ಲಿ ಉಡುಪಿಯಿಂದ ಬ್ರಹ್ಮಾವರ-ಕುಂಭಾಸಿ ಮಾರ್ಗವಾಗಿ ಉತ್ತರಕನ್ನಡ, ಮಹಾರಾಷ್ಟ್ರ, ಗುಜರಾತ್ ಹೀಗೆ ಮುಂದುವರಿದು ಸಮಗ್ರ ಭಾರತ ಪ್ರದಕ್ಷಿಣೆಗೆ ಒಂದು ವರ್ಷಕ್ಕೂ ಹೆಚ್ಚು ಕಾಲಮಿತಿ ತಗುಲಲಿದೆ.

LEAVE A REPLY

Please enter your comment!
Please enter your name here