ಮಂಗಳೂರು : ಈ ಸೀಸನ್‌ನಲ್ಲಿ, ಫಿಜಾ ಬೈ ನೆಕ್ಸಸ್ ತನ್ನ ಬಹುನಿರೀಕ್ಷಿತ ‘ಡೆನಿಮ್ ಮತ್ತು ಸ್ನೀಕರ್ ಫೆಸ್ಟ್’ ನ 4ನೇ ಆವೃತ್ತಿಯನ್ನು ಹೊತ್ತು ತಂದಿದೆ. ಅತ್ಯಾಧುನಿಕ ಫಿಟ್ಸ್, ಸ್ಟೇಟ್‌ಮೆಂಟ್ ಕಿಕ್ಸ್ ಮತ್ತು ಗಲ್ಲಿ-ಶೈಲಿಯ ಬಟ್ಟೆಗಳ ಪ್ರದರ್ಶನ ಹಾಗೂ ಮಾರಾಟದ ಸೀಮಿತ ಅವಧಿಯ ಸಂಭ್ರಮ ಇದಾಗಿದೆ.
ಶಾಲಾ-ಕಾಲೇಜುಗಳ ಮರುಆರಂಭದ ಸರಿಯಾದ ಸಮಯದಲ್ಲೇ ಈ ಹಬ್ಬವನ್ನು ಆಯೋಜಿಸಲಾಗಿದ್ದು, ಜಾಗತಿಕ ಮತ್ತು ದೇಶೀಯ ಪ್ರಮುಖ ಬ್ರ್ಯಾಂಡ್‌ಗಳು ಒಂದೇ ಸೂರಿನಡಿ ಇಲ್ಲಿ ಲಭ್ಯವಿರಲಿವೆ.
ದೈನಂದಿನ ಡೆನಿಮ್ ಅಗತ್ಯತೆಗಳಿಂದ ಹಿಡಿದು, ಸಖತ್ ಕ್ರೇಜ್ ಸೃಷ್ಟಿಸಿರುವ ಸ್ನೀಕರ್‌ಗಳವರೆಗೆ, ಗ್ರಾಹಕರು ಹೊಸ ಕಲೆಕ್ಷನ್‌ಗಳು, ಇತ್ತೀಚಿನ ಲಾಂಚ್‌ಗಳು ಮತ್ತು ಟ್ರೆಂಡ್‌ನಲ್ಲಿರುವ ವಿನ್ಯಾಸಗಳನ್ನು ಇಲ್ಲಿ ಅನ್ವೇಷಿಸಬಹುದಾಗಿದೆ. ಇದು ರಜಾದಿನಗಳ ಶಾಪಿಂಗ್ ಆಗಿರಲಿ, ಕಾಲೇಜು ವಾರ್ಡ್‌ರೋಬ್ ಬದಲಾಯಿಸುವುದಾಗಿರಲಿ ಅಥವಾ ನಿಮ್ಮ ಶೈಲಿಯನ್ನು ಅಪ್‌ಗ್ರೇಡ್ ಮಾಡಿಕೊಳ್ಳುವುದಾಗಿರಲಿ, ಈ ಹಬ್ಬವು ಪ್ರತಿಯೊಬ್ಬ ಫ್ಯಾಶನ್ ಪ್ರೇಮಿಗೂ ಸೂಕ್ತವಾದದ್ದನ್ನು ನೀಡುವ ಭರವಸೆ ನೀಡುತ್ತದೆ.
ಇದರೊಂದಿಗೆ, ತಿಂಗಳಿಡೀ ಗ್ರಾಹಕರಲ್ಲಿ ಉತ್ಸಾಹವನ್ನು ಕಾಯ್ದುಕೊಳ್ಳಲು ಆಕರ್ಷಕ ಶಾಪಿಂಗ್ ಬಹುಮಾನಗಳು, ಸೀಮಿತ ಅವಧಿಯ ಕೊಡುಗೆಗಳು, ಸಂವಾದಾತ್ಮಕ ಅನುಭವಗಳು ಮತ್ತು ಮೋಜಿನ ಗಿವ್ ಅವೇಗಳನ್ನು ಆಯೋಜಿಸಲಾಗಿದೆ.
ಟ್ರೆಂಡ್ ಸೆಟ್ ಮಾಡುವ ಸ್ಟೋರ್ ಫ್ರಂಟ್‌ಗಳು, ಆಕರ್ಷಕ ದೃಶ್ಯ ಪ್ರದರ್ಶನಗಳು ಮತ್ತು ಮಾಲ್‌ನಾದ್ಯಂತ ಹರಡಿರುವ ಸ್ಟ್ರೀಟ್-ಸ್ಟೈಲ್ ವೈಬ್‌ನೊಂದಿಗೆ, ಈ ‘ಡೆನಿಮ್ ಮತ್ತು ಸ್ನೀಕರ್ ಫೆಸ್ಟ್’ ಫಿಜಾ ಬೈ ನೆಕ್ಸಸ್ ಅನ್ನು ಈ ಸೀಸನ್‌ನ ನಗರದ ಪ್ರಮುಖ ಫ್ಯಾಶನ್ ತಾಣವನ್ನಾಗಿ ಮಾಡಲು ಸಜ್ಜಾಗಿದೆ.

