ಮೇ. 24 ರಂದು ಕಲಾಕುಂಚ ಕೇರಳ ಗಡಿನಾಡ ಘಟಕದಿಂದ ಸಾಹಿತ್ಯಾಭಿಯಾನ

0
11

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಘಕಟದಿಂದ ಮೇ 24 ರಂದು ಭಾನುವಾರ ಅಪರಾಹ್ನ 3 ಗಂಟೆ ಯಿಂದ ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿಯ ನಾರಾಯಣ ಮಂಗಲ “ಶ್ರೀನಿಧಿ” ಸಭಾಂಗಣದಲ್ಲಿ “ಸಾಹಿತ್ಯಾಭಿಯಾನ” ಹಮ್ಮಿಕೊಳ್ಳಲಾಗಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ಹಿರಿಯ ಸಾಹಿತಿ, ಗ್ರಂಥಾಲಯ ಸಂಗ್ರಹದ ಪುರಾತನ ಕಾಲದ ಗ್ರಂಥಗಳ ಬಗ್ಗೆ ವಿ.ಬಿ.ಕುಳಮರ್ವ ಈ ಸಾಹಿತ್ಯಾಭಿಯಾನ ನಡೆಸಿಕೊಡಲಿದ್ದಾರೆ. ಆಧ್ಯಾತ್ಮ ಪರಂಪರೆಯ ಸಾಹಿತ್ಯ ಬಗ್ಗೆ ಹಿರಿಯ, ಕಿರಿಯರು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸಾಹಿತ್ಯ ಅಭಿಯಾನ ಯಶಸ್ವಿಗೊಳಿಸಬೇಕಾಗಿ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಸಂಸ್ಥಾಪಕರಾದ ಜಯಲಕ್ಷ್ಮಿ ಕಾರಂತ್‌ರವರು ವಿನಂತಿಸಿದ್ದಾರೆ.

ಮಕ್ಕಳ ವಿದ್ಯಾಭ್ಯಾಸಕ್ಕೆ ಜ್ಞಾನ, ಪರಿಜ್ಞಾನ ಹೆಚ್ಚಿಸಲು ಮಕ್ಕಳ ಮುಂದಿನ ಭವಿಷ್ಯಕ್ಕೆ ದಿವ್ಯ, ಭವ್ಯ ನಾಂದಿಯಾಗಲಿ ಎಂದು ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್ ಪ್ರಕಟಿಸಿದ್ದಾರೆ.

LEAVE A REPLY

Please enter your comment!
Please enter your name here