ಮೇಕಪ್‌ ಕಳಚಿದ ವಧು ನೋಡಿ ಬೆಚ್ಚಿಬಿದ್ದ ವರ..!

0
24

ಮದುವೆಯಾದ ಮೊದಲ ರಾತ್ರಿಯೇ ವಿಚ್ಛೇದನಕ್ಕೆ ಅರ್ಜಿ;

ಟರ್ಕಿಯಲ್ಲಿ ನಡೆದಿರುವ ವಿಚಿತ್ರ ಘಟನೆೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮದುವೆಯಾದ ಮೊದಲ ರಾತ್ರಿಯಲ್ಲೇ ವರ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಘಟನೆ ಇದೀಗ ನೆಟ್ಟಿಗರ ಗಮನ ಸೆಳೆದಿದೆ.

ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದ ಮದುವೆಯಲ್ಲಿ ವಧು ಮೇಕಪ್‌ನಿಂದ ಅತಿ ಸುಂದರವಾಗಿ ಕಾಣಿಸಿಕೊಂಡಿದ್ದಳು. ನಿಶ್ಚಿತಾರ್ಥದಿಂದ ಮದುವೆಯವರೆಗಿನ ಎಲ್ಲಾ ಕಾರ್ಯಕ್ರಮಗಳಲ್ಲೂ ಆಕೆಯ ಅಲಂಕಾರ ಮತ್ತು ಮೇಕಪ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ, ಮದುವೆಯ ಎಲ್ಲಾ ವಿಧಿವಿಧಾನಗಳು ಮುಗಿದ ಬಳಿಕ ರಾತ್ರಿ ವೇಳೆ ವಧು ತನ್ನ ಮುಖದಲ್ಲಿದ್ದ ಸಂಪೂರ್ಣ ಮೇಕಪ್ ತೆಗೆದುಹಾಕಿದ್ದಾಳೆ.

ಸ್ವಲ್ಪ ಸಮಯದ ಬಳಿಕ ಕೋಣೆಗೆ ಬಂದ ವರ, ಮೇಕಪ್ ಇಲ್ಲದ ವಧುವಿನ ಮುಖ ನೋಡಿ ಅಚ್ಚರಿಗೊಂಡಿದ್ದಾನೆ. ತಾನು ಮದುವೆಯಾದ ಹುಡುಗಿ ಇದೇನಾ ಎಂಬ ಅನುಮಾನ ಬರುವಷ್ಟು ಆಕೆಯ ರೂಪ ಬದಲಾಗಿದ್ದನ್ನು ಕಂಡು ಆತ ಬೆಚ್ಚಿಬಿದ್ದಿದ್ದಾನೆ ಎನ್ನಲಾಗಿದೆ.

ಇದಾದ ಬಳಿಕ ವರ, ತನ್ನನ್ನು ಮೋಸ ಮಾಡಲಾಗಿದೆ ಎಂದು ಆರೋಪಿಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಮದುವೆಗೆ ಮುನ್ನ ವಧು ತನ್ನ ನಿಜವಾದ ರೂಪವನ್ನು ಮರೆಮಾಚಿ ಮೇಕಪ್ ಮೂಲಕ ಬೇರೆ ರೀತಿಯಲ್ಲಿ ತೋರಿಸಿಕೊಂಡಿದ್ದಾಳೆ. ಆಕೆಯ ನಿಜವಾದ ಮುಖ ಮೊದಲೇ ಗೊತ್ತಿದ್ದರೆ ಈ ಮದುವೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ಆತ ದೂರಿದ್ದಾನೆ.

ಈ ವಿಚಿತ್ರ ಪ್ರಕರಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು “ಕೇವಲ ಬಾಹ್ಯ ಸೌಂದರ್ಯ ನೋಡಿ ಮದುವೆಯಾಗುವುದೇ ತಪ್ಪು” ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು “ಮೇಕಪ್ ಕಾರಣಕ್ಕೆ ವಿಚ್ಛೇದನ ಕೇಳುವುದು ಅತಿರೇಕ” ಎಂದು ಟೀಕಿಸಿದ್ದಾರೆ.

ಒಟ್ಟಾರೆ, “ಮೇಕಪ್ ಡಿವೋರ್ಸ್” ಪ್ರಕರಣ ಇದೀಗ ಇಂಟರ್ನೆಟ್‌ನಲ್ಲಿ ಹಾಟ್ ಟಾಪಿಕ್ ಆಗಿದೆ.

LEAVE A REPLY

Please enter your comment!
Please enter your name here