ಹೆದ್ದಾರಿಗಳಲ್ಲಿ ಸ್ಪೀಡ್​ ರಾಡಾರ್​ ಕ್ಯಾಮೆರಾ ಕಾರ್ಯಾಚರಣೆ

0
16

ಉಡುಪಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗದ ಚಾಲನೆಗೆ ಬ್ರೇಕ್​ ಹಾಕಲು ಪೊಲೀಸ್​ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದು, ಜಿಲ್ಲೆಯಾದ್ಯಂತ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ 6 ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಸ್ಪೀಡ್​ ರಾಡಾರ್​ ಕ್ಯಾಮೆರಾಗಳು ಕಾರ್ಯಾಚರಣೆ ಆರಂಭಿಸಿವ ಹೆದ್ದಾರಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರನ್ನು ಜಿಲ್ಲಾ ಪೊಲೀಸ್​ ನಿಯಂತ್ರಣ ಕೊಠಡಿಯಿಂದಲೇ ನೇರವಾಗಿ ಮಾನಿಟರ್​ ಮಾಡಲಾಗುವುದು.

ಸದ್ಯಕ್ಕೆ 6 ಕಡೆ ಕ್ಯಾಮೆರಾ ಅಳವಡಿಸಲಾಗಿದ್ದು, ಹೊಸದಾಗಿ 14 ಕಡೆಗಳಲ್ಲಿ ಕ್ಯಾಮೆರಾ ಅಳವಡಿಕೆಗೆ ಟೆಂಡರ್​ ಆಗಿದ್ದು, ಶ್ರೀದಲ್ಲಿ ಕಾರ್ಯಾದೇಶ ನೀಡಲಾಗುವುದು ಎಂದು ಪೊಲೀಸ್​ ಇಲಾಖೆ ಅಧೀಕ್ಷಕ ಹರಿರಾಂ ಶಂಕರ್​ ತಿಳಿಸಿದ್ದಾರೆ.

ವೇಗ ಮಿತಿ ನಿಗದಿ

ಜಿಲ್ಲೆಯ ಪ್ರಮುಖ 6 ಸ್ಥಳಗಳಲ್ಲಿ ಸ್ಪೀಡ್​ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ವಾಹನಗಳ ಗರಿಷ್ಠ ವೇಗ ಮಿತಿಯನ್ನು ನಿಗದಿಪಡಿಸಲಾಗಿದೆ. ಕಾರ್ಕಳ – ದೂಪದಕಟ್ಟೆ ಮಾರ್ಗದಲ್ಲಿ ವೇಗ ಮಿತಿ 60 ಕಿಮೀ, ಪಡುಬಿದ್ರೆ , ಉಚ್ಚಿಲ, ಕಾಪು,- ದಂಡತೀರ್ಥ, ಕೋಟ – ತೆಕ್ಕಟ್ಟೆ, ಗಂಗೊಳ್ಳಿ – ತ್ರಾಸಿ, ಬೈಂದೂರು – ನಾಯಕನಕಟ್ಟಿ ಮಾರ್ಗದಲ್ಲಿ ಗರಿಷ್ಠ ವೇಗ ಮಿತಿ 80 ಕಿಮೀ ನಿಗದಿಯಾಗಿದೆ.

ಹೈಟೆಕ್​ ರಾಡಾರ್​ ಕ್ಯಾಮೆರಾಗಳು ಕೇವಲ ಅತಿವೇಗವನ್ನು ಮಾತ್ರವಲ್ಲದೆ ದ್ವಿಚಕ್ರ ವಾಹನಗಳಲ್ಲಿ ತ್ರಿಪಲ್​ ರೈಡಿಂಗ್​ ಮಾಡುವುದು. ಸೀಟ್​ ಬೆಲ್ಟ್​ ಧರಿಸದೆ ವಾಹನ ಚಲಾಯಿಸುವುದು, ಹೆಲ್ಮೆಟ್​ ಧರಿಸದೆ ಬೈಕ್​ ಚಾಲನೆ ಮಾಡುವುದು, ಚಾಲನೆ ಮಾಡುವಾಗ ಮೊಬೈಲ್​ ಫೋನ್​ ಬಳಕೆ, ಒನ್​-ವೇ ಅಥವಾ ತಪ್ಪು ದಿಕ್ಕಿನಲ್ಲಿ ವಾಹನ ಚಲಾಯಿಸುವುದು ಮುಂತಾದ ಸಂಚಾರ ನಿಯಮ ಉಲ್ಲಂಘನೆಗಳನ್ನೂ ಪತ್ತೆಹಚ್ಚಲಿದೆ.

ಕ್ಯಾಮೆರಾ ಮೂಲಕ ನಿಯಮ ಉಲ್ಲಂಘನೆ ಪತ್ತೆಯಾದ ನಂತರ ದಂಡದ ಚಲನ್​ಗಳನ್ನು ಪೋಸ್ಟ್​ ಮೂಲಕ ನೇರವಾಗಿ ಮನೆಗೆ ಕಳುಹಿಸಲಾಗುತ್ತದೆ. ಚಲನ್​ ಸ್ವೀಕರಿಸಿದ 7 ದಿನಗಳ ಒಳಗಾಗಿ ಯಾವುದೇ ಪೊಲೀಸ್​ ಠಾಣೆಯಲ್ಲಾದರೂ ದಂಡದ ಮೊತ್ತವನ್ನು ಪಾವತಿಸಬೇಕಾಗಿದೆ.

LEAVE A REPLY

Please enter your comment!
Please enter your name here