ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಮೊಬೈಲ್‌ನಲ್ಲೇ ಸಿಗಲಿದೆ ಡಿಜಿಟಲ್ ಟಿಸಿ

0
42

ದ್ವಿತೀಯ ಪಿಯುಸಿ ಪೂರ್ಣಗೊಳಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಸಜ್ಜಾಗುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೆ Department of School Education and Literacy ಮಹತ್ವದ ಸಿಹಿಸುದ್ದಿ ನೀಡಿದೆ. ಕಾಲೇಜುಗಳಿಗೆ ಅಲೆದಾಟಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಡಿಜಿಟಲ್ ವರ್ಗಾವಣೆ ಪ್ರಮಾಣ ಪತ್ರ (Digital Transfer Certificate) ವಿತರಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಶಾಲಾ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಪದ್ಮಿನಿ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಡಿಜಿಟಲ್ ಟಿಸಿ ಪಡೆಯುವುದು ಹೇಗೆ?

ಈ ಬಾರಿ ವಿದ್ಯಾರ್ಥಿಗಳ ವರ್ಗಾವಣೆ ಪ್ರಕ್ರಿಯೆಯನ್ನು ಸಂಪೂರ್ಣ ಸರಳಗೊಳಿಸಲಾಗಿದೆ. Karnataka School Examination and Assessment Board ಬಳಿ ಇರುವ ಫಲಿತಾಂಶದ ಮಾಹಿತಿಯನ್ನು ಬಳಸಿ, ತಂತ್ರಜ್ಞಾನದ ಮೂಲಕ ಡಿಜಿಟಲ್ ಟಿಸಿಗಳನ್ನು ಸ್ವಯಂಚಾಲಿತವಾಗಿ ಸಿದ್ಧಪಡಿಸಲಾಗಿದೆ.

ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನಲ್ಲಿರುವ DigiLocker ಆಪ್ ಮೂಲಕ ಅತ್ಯಂತ ಸುಲಭವಾಗಿ ಟಿಸಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಹೊಸ ಡಿಜಿಟಲ್ ಟಿಸಿಯ ವಿಶೇಷತೆಗಳು

ಹಳೇ ಮಾದರಿಯ ವರ್ಗಾವಣೆ ಪತ್ರಗಳಿಗೆ ಹೋಲಿಸಿದರೆ ಈ ಹೊಸ ಡಿಜಿಟಲ್ ಟಿಸಿ ಹಲವು ಬದಲಾವಣೆಗಳೊಂದಿಗೆ ಬಂದಿದೆ. ಬಾಕಿ ಶುಲ್ಕದ ವಿವರ, ವಿದ್ಯಾರ್ಥಿವೇತನ ಹಾಗೂ ಹಾಜರಾತಿ ದಿನಗಳ ಲೆಕ್ಕಾಚಾರದಂತಹ ಕಾಲಂಗಳನ್ನು ಕೈಬಿಡಲಾಗಿದೆ.

ಇದೇ ವೇಳೆ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಸುರಕ್ಷಿತವಾಗಿ ಡಿಜಿಟಲ್ ಲಿಂಕ್ ಮಾಡಲು SATS ನಂಬರ್, ಪರೀಕ್ಷಾ ರಿಜಿಸ್ಟರ್ ನಂಬರ್ ಹಾಗೂ APAAR ID ಅನ್ನು ಕಡ್ಡಾಯವಾಗಿ ಸೇರಿಸಲಾಗಿದೆ.

ಸರ್ಕಾರದ ಈ ಡಿಜಿಟಲ್ ಕ್ರಮದಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಟಿಸಿಗಾಗಿ ಕಾಲೇಜುಗಳ ಮುಂದೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ತಪ್ಪಿದಂತಾಗಿದೆ.

LEAVE A REPLY

Please enter your comment!
Please enter your name here