2026-27 ಶಾಲಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳಿಗೆ 18 ದಿನ ದಸರಾ ರಜೆ ಸಿಹಿ ಸುದ್ದಿ!

0
30

ಬೆಂಗಳೂರು : ರಾಜ್ಯ ಶಾಲಾ ಶಿಕ್ಷಣ ಇಲಾಖೆಯು 2026-27ನೇ ಸಾಲಿನ ಅಧಿಕೃತ ಶೈಕ್ಷಣಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿ ವಿದ್ಯಾರ್ಥಿಗಳಿಗೆ 18 ದಿನಗಳ ದಸರಾ ರಜೆ ಲಭಿಸಿದೆ.

ಹೊಸ ವೇಳಾಪಟ್ಟಿಯ ಪ್ರಕಾರ, ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೇ 29, 2026ರಿಂದ ಪುನರಾರಂಭಗೊಳ್ಳಲಿವೆ.

ಶೈಕ್ಷಣಿಕ ಅವಧಿಗಳ ವಿವರ

  • ಮೊದಲನೇ ಅವಧಿ: 29.05.2026 ರಿಂದ 02.10.2026ರವರೆಗೆ
  • ಎರಡನೇ ಅವಧಿ: 22.10.2026 ರಿಂದ 10.04.2027ರವರೆಗೆ

ರಜೆಗಳ ಮಾಹಿತಿ

  • ದಸರಾ ರಜೆ: 03.10.2026 ರಿಂದ 21.10.2026ರವರೆಗೆ
  • ಬೇಸಿಗೆ ರಜೆ: 11.04.2027 ರಿಂದ 28.05.2027ರವರೆಗೆ

ಒಟ್ಟು ದಿನಗಳ ಲೆಕ್ಕ

  • ಶಾಲಾ ಕರ್ತವ್ಯದ ದಿನಗಳು – 245
  • ಒಟ್ಟು ರಜೆ ದಿನಗಳು – 119
  • ಬೋಧನೆಗೆ ಲಭ್ಯ ದಿನಗಳು – 181

ಪ್ರಮುಖ ಸೂಚನೆಗಳು

  • ಮೇ 30ರಿಂದ ಶಾಲಾ ದಾಖಲಾತಿ ಹಬ್ಬ ಆರಂಭ
  • ಜೂನ್ 30ರೊಳಗೆ ದಾಖಲಾತಿ ಪೂರ್ಣಗೊಳಿಸಲು ಸೂಚನೆ
  • ಸರ್ಕಾರಿ ಶಾಲಾ ಮಕ್ಕಳಿಗೆ 2 ಜೋಡಿ ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣೆ
  • ಎಲ್ಲಾ ಶಾಲೆಗಳಲ್ಲಿ ಅಂಬೇಡ್ಕರ್ ಜಯಂತಿ ಕಡ್ಡಾಯ ಆಚರಣೆ
  • ಮಳೆ ಅಥವಾ ಅನಿವಾರ್ಯ ರಜೆಗಳಿಗೆ ಪರಿಹಾರ ಬೋಧನೆ ನಡೆಸಲು ಆದೇಶ

ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ Vikas Kishore Suralkar ಈ ಆದೇಶ ಹೊರಡಿಸಿದ್ದು, ರಾಜ್ಯದ ಎಲ್ಲಾ ಶಿಕ್ಷಣಾಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here