ವರದಿ :-ಮಂದಾರ ರಾಜೇಶ್ ಭಟ್
ಕೋಡೂರು : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇಂದಿನ ಜಂಜಾಟದ ಬದುಕಿನಲ್ಲಿ ಮನಸ್ಸಿಗೆ ಶಾಂತಿ ನೆಮ್ಮದಿ ನೀಡುವ ಪವಿತ್ರ “ಶ್ರೀಮದ್ಭಾಗವತ ಸಪ್ತಾಹ ಜ್ಞಾನ ಸತ್ರ”ಕ್ಕೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೋಡೂರಿನ ‘ಶ್ರೀ ಸಾಯಿ ಜ್ಞಾನ ಮಂದಿರ’ ಸಾಕ್ಷಿಯಾಗುತ್ತಿದೆ.

ಅಧಿಕ ಮಾಸದ ಅತ್ಯಂತ ಶ್ರೇಷ್ಠ ದಿನಗಳ ನಿಮಿತ್ತ ಹಮ್ಮಿಕೊಳ್ಳಲಾಗಿರುವ ಈ ಆಧ್ಯಾತ್ಮಿಕ ಮಹೋತ್ಸವವು ಮೇ 27 ರಿಂದ ಜೂನ್ 3 ರವರೆಗೆ ವಿಜೃಂಭಣೆಯಿಂದ ಜರುಗಲಿದೆ. ಪ್ರತಿದಿನ ಉಪಹಾರ ಮತ್ತು ಅನ್ನಪ್ರಸಾದ ವ್ಯವಸ್ಥೆ ಇದೆ
ಮಂತ್ರಘೋಷಗಳ ನಿನಾದ
ಪ್ರತಿದಿನ ಮುಂಜಾನೆ ಕಿವಿಗೆ ಬೀಳುವ ಗಣಪತಿ ಹವನದ ಮಂತ್ರಘೋಷ, ಬೆಳಿಗ್ಗೆ 7:30ಕ್ಕೆ ಆರಂಭವಾಗುವ ಭಕ್ತಿಪೂರ್ವಕ ಭಾಗವತ ಮತ್ತು ದುರ್ಗಾ ಸಪ್ತಶತಿ ಪಾರಾಯಣ ಹಾಗೂ ಮಧ್ಯಾಹ್ನ 12:30ರ ಮಹಾಮಂಗಳಾರತಿ ಭಕ್ತರ ಮನಸ್ಸನ್ನು ಭಕ್ತಿಭಾವದಲ್ಲಿ ತೇಲಿಸಲಿವೆ.
ಜ್ಞಾನದ ರಸದೌತಣ!
ಪ್ರತಿದಿನ ಸಂಜೆ 5:30ಕ್ಕೆ ಪ್ರಖ್ಯಾತ ವಿದ್ವಾಂಸರು ಹಾಗೂ ಸ್ವರ್ಣವಲ್ಲಿಯ ನಿವೃತ್ತ ವೇದಾಂತ ಪ್ರಾಧ್ಯಾಪಕರಾದ ಡಾ. ಶಂಕರಭಟ್ (ಬಾಲಿಗದ್ದೆ) ಅವರಿಂದ ಶ್ರೀಭಾಗವತ ಪ್ರವಚನ ನಡೆಯಲಿದೆ.
ಕಲಿಯುಗದಲ್ಲಿ ಮೋಕ್ಷ ಹಾಗೂ ನೆಮ್ಮದಿಗೆ ಭಕ್ತಿಮಾರ್ಗವೇ ಸುಲಭ ಉಪಾಯ ಎಂಬುದನ್ನು ಅರಿಯಲು ಇದೊಂದು ಸುವರ್ಣಾವಕಾಶ.
ಜೂನ್ 3ರ ಬುಧವಾರದಂದು ವಾಸುದೇವ ಮಂತ್ರದೊಂದಿಗೆ ಸಪ್ತಾಹ ಯಜ್ಞದ ಉದ್ಯಾಪನ ಹೋಮ ನಡೆಯಲಿದ್ದು, ಬೆಳಿಗ್ಗೆ 11:00 ಗಂಟೆಗೆ ಮಹಾ ಪೂರ್ಣಾಹುತಿ ನೆರವೇರಲಿದೆ. ತದನಂತರ ಪ್ರವಚನ ಮಧ್ಯಾಹ್ನ 1:20ಕ್ಕೆ ಭಕ್ತಾದಿಗಳಿಗೆ ಭರ್ಜರಿ ಭೋಜನ ಪ್ರಸಾದ (ಅನ್ನದಾಸೋಹ) ವ್ಯವಸ್ಥೆ ಇರಲಿದೆ.
“ಪ್ರೇಮವೇ ದೇವರು, ದೇವರೇ ಪ್ರೇಮ” ಎಂಬ ಭಗವಾನ್ ಬಾಬಾರ ದಿವ್ಯ ಸಂದೇಶದೊಂದಿಗೆ ಆಯೋಜಿತವಾಗಿರುವ ಈ ಜ್ಞಾನ ಯಜ್ಞಕ್ಕೆ ಬನ್ನಿ, ಭಾಗವಹಿಸಿ, ಪುಣ್ಯದ ಭಾಜನರಾಗಿ! ಎಂದು ಪ್ರತಿಮಾ ಕೋಡೂರು ಮತ್ತು ಚಿದಂಬರ ಹೆಚ್ಎಸ್ ಹಾಗೂ ಸತ್ಯಂ ಶಿವಂ ಸುಂದರಂ ಭಕ್ತವೃಂದ ಎಲ್ಲರನ್ನೂ ಆಹ್ವಾನಿಸಿದೆ.
ಈ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಶ್ರೀನಿವಾಸಪುರದ ಕರಾಡ ಬ್ರಾಹ್ಮಣ ಸುಧಾರಕ ಸಂಘ ಗುಂಡ್ಯಡ್ಕ ಅಧ್ಯಕ್ಷರು ಸಹಿತ ಸುಮಾರು 20 ಜನ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು
ಜ್ಯೋತಿಷ್ಯ ವಿದ್ವಾನ್ ದಿನೇಶ್ ಭಾರದ್ವಜ ಸುಳ್ಯ, ವೆಂಕಟ ಕೃಷ್ಣ ಗುತ್ತಿಗಾರು,ಪತ್ರಕರ್ತ ಮಂದಾರ ರಾಜೇಶ್ ಭಟ್,ಸುನಿಲ್ ಗರ್ದೆ, ಶಶಿಕಲಾ ಬಾಯಾರು ಸಹಿತ ಪುತ್ತೂರು, ಮಂಗಳೂರು,ಸುಳ್ಯ, ಉಡುಪಿ, ಹಾಗೂ ಕರಾವಳಿ ಭಾಗದಿಂದ ಬಂದ ಹಲವು ಭಗವದ್ಭಕ್ತರು ಉಪಸ್ಥಿತರಿದ್ದರು.

