ಪುತ್ತಿಗೆ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶುಭ ಆರ್. ಹೆಬ್ಬಾರ್ ವಿಧಿವಶ

0
26

ಮೂಡುಬಿದಿರೆ : ಕಬ್ಬಿನಾಲೆ ಮೂಲದ , ಮೂಡುಬಿದಿರೆಯಲ್ಲಿ ಸ್ವಸ್ತಿಕ್ ಗ್ರಾಫಿಕ್ಸ್ ನಡೆಸುತ್ತಿರುವ ಒಂಟಿಕಟ್ಟೆ ಸಮೀಪ ವಾಸಿಸುತ್ತಿರುವ ರಾಘವೇಂದ್ರ ಹೆಬ್ಬಾರ್ ಅವರ ಧರ್ಮಪತ್ನಿ 44 ವರ್ಷ ಪ್ರಾಯದ ಶುಭ ಆರ್. ಹೆಬ್ಬಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಮೇ 27ರಂದು ದೈವಾಧೀನರಾಗಿರುತ್ತಾರೆ.

ಪುತ್ತಿಗೆ ಪಂಚಾಯತ್ ಗೆ 2021 -25ನೇ ಸಾಲಿನಲ್ಲಿ ಆಯ್ಕೆಗೊಂಡ ಶುಭ ಹೆಬ್ಬಾರ್ ತಮ್ಮ ಪ್ರಥಮ ಅವಧಿಯಲ್ಲಿಯೇ ಉಪಾಧ್ಯಕ್ಷರಾಗಿ ಆಯ್ಕೆಗೊಂಡು ಸಾಕಷ್ಟು ಪ್ರಗತಿಪರ ಕಾರ್ಯಗಳನ್ನು ನಡೆಸಿ ಕೊಟ್ಟಿರುತ್ತಾರೆ ಎಂದು ಪುತ್ತಿಗೆ ಪಂಚಾಯತ್ ಸದಸ್ಯರುಗಳು ನೆನಪಿಸಿಕೊಂಡಿರುತ್ತಾರೆ.

ವರದಿ ರಾಯಿ ರಾಜ ಕುಮಾರ

LEAVE A REPLY

Please enter your comment!
Please enter your name here