
ಬೆಳುವಾಯಿ : ಶ್ರೀ ಮೂಕಾಂಬಿಕಾ ಕುಣಿತ ಭಜನಾ ಮಂಡಳಿ ಕರಿಯಣ್ಣನಂಗಡಿ ಬೆಳುವಾಯಿ ವತಿಯಿಂದ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ ಕಾರ್ಯಕ್ರಮ ಇಂದು ವಿಲಾಸಿನಿ ನಿವಾಸ ಶ್ರೀ ಮೂಕಾಂಬಿಕಾ ಸಾನಿಧ್ಯ, ಕರಿಯಣ್ಣನಂಗಡಿ ಬೆಳುವಾಯಿ ಇಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಹಾಗೂ ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಂಡದ ಪ್ರತಿಭಾನ್ವಿತ ವಿದ್ಯಾರ್ಥಿನಿ ಕುಮಾರಿ ಸಿಂಚನ ಕರಿಯಣ್ಣನಂಗಡಿ ಬೆಳುವಾಯಿ ಅವರನ್ನು ಸನ್ಮಾನಿಸಲಾಯಿತು. ಇವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 88.48% ಅಂಕಗಳೊಂದಿಗೆ 553 ಅಂಕ ಪಡೆದು ತಂಡಕ್ಕೆ ಕೀರ್ತಿ ತಂದಿದ್ದಾರೆ.

ಕುಮಾರಿ ಸಿಂಚನ ಅವರ ಸಾಧನೆಗೆ ಭಜನಾ ಮಂಡಳಿ ಸದಸ್ಯರು, ಗ್ರಾಮಸ್ಥರು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು. ತಂಡದ ಅಧ್ಯಕ್ಷರು ರೋಶನ್ ಆಳ್ವ, ಹಾಗೂ ಸುಖಲತಾ ಮತ್ತು ತಂಡದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
