ಒಲಂಪಿಯಾಡ್ ಪರೀಕ್ಷೆ ಪ್ರಥಮ ಸ್ಥಾನ ಬಂದ ವಿದ್ಯಾರ್ಥಿಗೆ ಸ್ಕಾಲರ್ ಶಿಪ್

0
27

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) CRE ತರಬೇತಿ ಸಂಸ್ಥೆ ಬೆಳ್ತಂಗಡಿಯಲ್ಲಿ, ಬೆಳ್ತಂಗಡಿ ಹಾಗೂ ಗುರುವಾಯನಕೆರೆಯ ಸಿ.ಎಸ್.ಸಿ ಸೇವಾದಾರರ ಸಭೆಯಲ್ಲಿ ಸಿ.ಎಸ್.ಸಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀಯತ ಜಯಂತ್ ಪೂಜಾರಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಿ.ಎಸ್.ಸಿ ಕೇಂದ್ರದ ಮೂಲಕ ಸರ್ಕಾರಿ ಸೇವೆಯನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ.
ಇದರ ಜೊತೆಗೆ DIGIPAY ಸೇವೆಯನ್ನು ನೀಡುತ್ತಿದ್ದು ಜನಸಾಮಾನ್ಯರು ತಮ್ಮ ಖಾತೆಯಲ್ಲಿ ಇರುವ ಹಣವನ್ನು ತಮ್ಮ ಊರಿನಲ್ಲಿ ಇರುವ ಸೇವಾಕೇಂದ್ರದಲ್ಲಿ ಹಣ ವಿತ್ ಡ್ರಾ ಮಾಡಿ ನಗದು ಪಡೆಯಲು ಅವಕಾಶ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭಾರತ ಸರ್ಕಾರದ IT ಸಚಿವಾಲಯದಿಂದ CSC ಈ ಗವರ್ನೆನ್ಸ್ ಮೂಲಕ ನಡೆಸಲ್ಪಡುವ ಸ್ಪರ್ಧಾತ್ಮಕ ಪರೀಕ್ಷೆಯಾದ ಒಲಿಂಪಿಯಾಡ್ ಪರೀಕ್ಷೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಬೆಳ್ತಂಗಡಿ ಸಿ.ಎಸ್.ಸಿ ಕೇಂದ್ರದಲ್ಲಿ ನೊಂದಾವಣೆ ಮಾಡಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಸರ್ಟೀಫಿಕೆಟ್ ವಿತರಣೆಯನ್ನು ಮಾಡಲಾಯಿತು, ಹಾಗೂ ಪುದುವೆಟ್ಟು ಗ್ರಾಮದ ಒಲಿಂಪಿಯಾಡ್ ಪರೀಕ್ಷೆಯಲ್ಲಿ ರಾಂಕ್ ಪಡೆದು 30,000 ರೂ ಸ್ಕಾಲರ್ಶಿಪ್ ಅರ್ಹವಾಗಿರುವ ವಿದ್ಯಾರ್ಥಿನಿ ವಿಜಿತಾ ರವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ ಶ್ರೀಯತ ದಿನೇಶ್ ಹಾಗೂ ಗುರುವಾಯನಕೆರೆ ಯೋಜನಾಧಿಕಾರಿಯಾದ ಶ್ರೀಯುತ ಹರೀಶ್ ಆರ್.ಎಸ್ , ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿಯಾದ ಶ್ರೀಯುತ ಯಶೋಧರ, ಸಿ.ಎಸ್.ಸಿ ವಿಭಾಗದ ಉಡುಪಿ ಪ್ರಾದೇಶಿಕ ಕಛೇರಿಯ ಯೋಜನಾಧಿಕಾರಿಯಾದ ಶ್ರೀಯುತ ದಿಲೀಪ್, ಹಾಗೂ ಎರಡು ತಾಲೂಕಿನ ಹಣಕಾಸು ಪ್ರಬಂಧಕರಾದ ಆಕಾಶ್, ರತನ್ , ತಾಲೂಕು ನೊಡೆಲ್ ಅಧಿಕಾರಿಯಾದ ದಿಕ್ಷೀತ್ , ಸುರೇಶ ನಾಯ್ಕ, ನಗದು ಮೇಲ್ವಿಚಾರಕರಾದ ಮಾರುತಿ, ಸವೀನ್, ವಸಂತಿ, ಹಾಗೂ ಎಲ್ಲಾ ಸಿ.ಎಸ್.ಸಿ ಸೇವಾದಾರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here