ದಾವಣಗೆರೆಯ ದೈವಜ್ಞ ರೇವಣಕರ್ ಪರಿವಾರದಿಂದ ಪ್ರತೀ ವರ್ಷದಂತೆ ಈ ವರ್ಷವೂ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಸಾಧನೆ ಮಾಡಿದ ದೈವಜ್ಞ ಬ್ರಾಹ್ಮಣ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮುಂದಿನ ಜೀವನದ ದಿವ್ಯ ಭವ್ಯ ಭವಿಷ್ಯಕ್ಕಾಗಿ ಪ್ರೋತ್ಸಾಹಿಸುವ ಸಲುವಾಗಿ ವರ್ಣರಂಜಿತ ಅದ್ದೂರಿಯಾಗಿ “ದೈವಜ್ಞ ವಿದ್ಯಾಸಿರಿ” ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಜೊತೆಗೆ ದೈವಜ್ಞ ಸಮಾಜದ ಅಂಗವಿಕಲರಿಗೆ ಸಹಾಯ ಹಸ್ತ ನೀಡಿಲಾಗುವುದು ಎಂದು ದೈವಜ್ಞ ರೇವಣಕರ್ ಪರಿವಾರದ ಪ್ರಧಾನ ಕಾರ್ಯದರ್ಶಿ ಸಂಜಯ್ ರತ್ನಾಕರ ರೇವಣಕರ್ ತಿಳಿಸಿದ್ದಾರೆ.
ಮೇ. 31 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಗರದ ಪಿ.ಬಿ.ರಸ್ತೆಯಲ್ಲಿರುವ ರೇಣುಕಾ ಬಡಾವಣೆಯಲ್ಲಿ ಇರುವ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆಯುವ ಈ ವಿಜೃಂಭಣೆಯ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳಿಗೆ ಮಂಗಳ ವಾದ್ಯದೊಂದಿಗೆ ಮುತ್ತೆöÊದೆಯರು ಪೂರ್ಣಕುಂಭ ಸ್ವಾಗತಿಸುತ್ತಾರೆ.
ಸಮಾರಂಭದ ಅಧ್ಯಕ್ಷತೆಯನ್ನು ದೈವಜ್ಞ ರೇವಣಕರ್ ಪರಿವಾರದ ನೂತನ ಅಧ್ಯಕ್ಷರಾದ ಮಂಜುನಾಥ್ ಎನ್.ರೇವಣಕರ್ ವಹಿಸಲಿದ್ದಾರೆ.
ಸಮಾರಂಭದ ಉದ್ಘಾಟನೆಯನ್ನು ದಾವಣಗೆರೆಯ ನೂತನ ಶಾಸಕರಾದ ಶ್ಯಾಮನೂರು ಸಮರ್ಥ್ ಮಲ್ಲಿಕಾರ್ಜುನ್ ನೆರವೆರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೋವಾದ ರೇವಣದ ವಿಮಲೇಶ್ವರ ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ರಾಮನಾಥ್ ಪ್ರಭು ದೇಸಾಯಿ, ದೈವಜ್ಞ ರೇವಣಕರ್ ಪರಿವಾರದ ಗೌರವ ಅಧ್ಯಕ್ಷರಾದ ಡಾ. ನಲ್ಲೂರು ಅರುಣಾಚಲ ಎನ್.ರೇವಣಕರ್, ದಾವಣಗೆರೆಯ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಪ್ರಶಾಂತ ವಿ. ವರ್ಣೇಕರ್, ಮೈಸೂರಿನ ಸಮಾಜ ಸೇವಕಿ ಮೀರಾ ನಾಗೇಶ್ ರೇವಣಕರ್ ಆಗಮಿಸಲಿದ್ದಾರೆ.
ಈ ಅಪರೂಪದ ಶಿಕ್ಷಣದ ಕ್ಷೇತ್ರದ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಕ್ಕಳಿಗೆ ಪ್ರೋತ್ಸಾಹಿಸಿ ಸಮಾರಂಭ ಯಶಸ್ವಿಗೊಳಿಸಬೇಕಾಗಿ ದೈವಜ್ಞ ಬ್ರಾಹ್ಮಣ ರೇವಣಕರ್ ಪರಿವಾರದ ಖಜಾಂಚಿ ಮದನ್ ಟಿ.ರೇವಣಕರ್ ವಿನಂತಿಸಿದ್ದಾರೆ. ಗೋಷ್ಠಿಯಲ್ಲಿ ದಾವಣಗೆರೆಯ ದೈವಜ್ಞ ರೇವಣಕರ್ ಪರಿವಾರದ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್‌ಶೆಣೈ ಉಪಸ್ಥಿತರಿದ್ದರು.

