ಕಾರ್ಕಳದ ಸಾರ್ವಜನಿಕರ ಕೂಗನ್ನು ಆಲಿಸದ ಪುರಸಭೆ, ತುರ್ತು ಕೆಲಸಕ್ಕೆ ಸ್ಪಂದನೆ ನೀಡದ ಪುರಸಭೆ ಆಡಳಿತಕ್ಕೆ ಧಿಕ್ಕಾರ : ಕಾರ್ಕಳ ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್ ಹೇಳಿಕೆ..!

0
25

ಕಾರ್ಕಳ : ಪುರಸಭೆಯ ವ್ಯಾಪ್ತಿಯ ಐತಿಹಾಸಿಕ ಅನಂತ ಶಯನ ದೇವಸ್ಥಾನದ ವೃತ್ತದ ಬಳಿ ಬೃಹತ್ ಗಾತ್ರದ ಒಂದು ಬಾವಿ ನಿರ್ಮಾಣ ವಾಗಿದ್ದು ಸುಮಾರು ಹದಿನೈದು ದಿನಗಳಿಂದ ಈ ರೀತಿ ಆಗಿದ್ದು ಪುರಸಭೆಯ ಆಡಳಿತ ವರ್ಗಕ್ಕೆ ತಿಳಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದೆ ಪುರಸಭೆ ಅಧಿಕಾರಿಗಳು ಮೌನವಾಗಿದ್ದಾರೆ , ಶಾಲಾ ಕಾಲೇಜು ಗಳು ಇಂದಿನಿಂದ ಆರಂಭವಾಗಿದ್ದು ರಸ್ತೆ ಯಲ್ಲಿ ನಡೆದುಕೊಂಡು ಹೋಗುವ ಮಕ್ಕಳಿಗೂ ಈ ಬಾವಿಯಿಂದ ತೊಂದರೆ ಅನುಭವಿಸುವಂತಾಗಿದೆ ಅದಲ್ಲದೇ ಮಕ್ಕಳು ಕೈ ಕಾಲು ಮೂಳೆ ಮುರಿದುಕೊಂಡು ಬೀಳುವಂತ ಪರಿಸ್ಥಿತಿ ಎದುರಾಗಿದ್ದರೂ ಪುರಸಭೆ ಯಾವುದೇ ಗಮನ ಹರಿಸುವುದಿಲ್ಲ .

ಇವತ್ತು ಈ ಗುಂಡಿ ಮುಚ್ಚುವ ಕಾಮಗಾರಿ ಆಗದಿದ್ದಲ್ಲಿ ಪುರಸಭೆಗೆ ಸಾರ್ವಜನಿಕರು ಮುತ್ತಿಗೆ ಹಾಕುವ ಪರಿಸ್ಥಿತಿ ಎದುರಾಗುತ್ತದೆ ತೆರೆದ ಒಳಚರಂಡಿ ಮುಚ್ಚುವ ವ್ಯವಸ್ಥೆಯನ್ನು ಕೂಡಲೇ ಮಾಡಬೇಕು ಎಂದು ಕಾರ್ಕಳ ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್ ಮಾಧ್ಯಮಕ್ಕೆ ತಿಳಿಸಿದರು.

LEAVE A REPLY

Please enter your comment!
Please enter your name here