ಜೂನ್ ತಿಂಗಳಲ್ಲಿ ಬ್ಯಾಂಕ್‌ಗೆ ಹೋಗುವ ಮುನ್ನ ಈ ಪಟ್ಟಿ ನೋಡಿ ; 12 ದಿನ ರಜೆ ಘೋಷಣೆ..!

0
74

ನವದೆಹಲಿ,ಕರ್ನಾಟಕ : ಜೂನ್ ತಿಂಗಳಲ್ಲಿ ಬ್ಯಾಂಕ್ ವ್ಯವಹಾರಗಳನ್ನು ಯೋಜಿಸುತ್ತಿರುವ ಗ್ರಾಹಕರಿಗೆ ಪ್ರಮುಖ ಮಾಹಿತಿ ಇಲ್ಲಿದೆ. 2026ರ ಜೂನ್ ತಿಂಗಳಲ್ಲಿ ವಿವಿಧ ಹಬ್ಬಗಳು, ಸ್ಮರಣಾ ದಿನಗಳು ಹಾಗೂ ವಾರಾಂತ್ಯ ರಜೆಗಳನ್ನು ಸೇರಿಸಿ ದೇಶದ ವಿವಿಧ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 12 ದಿನಗಳವರೆಗೆ ರಜೆ ಇರಲಿದೆ. ಆದರೆ ಈ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗಲಿದ್ದು, ಕರ್ನಾಟಕದಲ್ಲಿ 7 ದಿನ ಬ್ಯಾಂಕುಗಳು ಬಂದ್ ಆಗಲಿವೆ.

ಮೊಹರಂ, ಮಹಾರಾಣಾ ಪ್ರತಾಪ್ ಜಯಂತಿ, ಶ್ರೀ ಗುರು ಅರ್ಜುನ ದೇವ್ ಬಲಿದಾನ ದಿನ, ಸಂತ ಗುರು ಕಬೀರ್ ಜಯಂತಿ ಸೇರಿದಂತೆ ಹಲವು ವಿಶೇಷ ದಿನಗಳ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್ ರಜೆ ಘೋಷಿಸಲಾಗಿದೆ. ಇದರಲ್ಲಿ ಆರು ದಿನಗಳು ನಿಯಮಿತ ಭಾನುವಾರ ಹಾಗೂ ಶನಿವಾರದ ರಜೆಗಳಾಗಿವೆ.

2026ರ ಜೂನ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ

ಜೂನ್ 7 (ಭಾನುವಾರ) – ವಾರಾಂತ್ಯ ರಜೆ
ಜೂನ್ 13 (ಎರಡನೇ ಶನಿವಾರ) – ಬ್ಯಾಂಕ್ ರಜೆ
ಜೂನ್ 14 (ಭಾನುವಾರ) – ವಾರಾಂತ್ಯ ರಜೆ
ಜೂನ್ 15 (ಸೋಮವಾರ) – ರಾಜ ಸಂಕ್ರಾಂತಿ, ವೈಎಂಎ ದಿನ (ಒಡಿಶಾ, ಮಿಝೋರಾಂ)
ಜೂನ್ 17 (ಬುಧವಾರ) – ಮಹಾರಾಣಾ ಪ್ರತಾಪ್ ಜಯಂತಿ (ಹರ್ಯಾಣ, ಹಿಮಾಚಲ ಪ್ರದೇಶ, ರಾಜಸ್ಥಾನ)
ಜೂನ್ 18 (ಗುರುವಾರ) – ಶ್ರೀ ಗುರು ಅರ್ಜುನ ದೇವ್ ಬಲಿದಾನ ದಿನ (ಪಂಜಾಬ್)
ಜೂನ್ 21 (ಭಾನುವಾರ) – ವಾರಾಂತ್ಯ ರಜೆ
ಜೂನ್ 26 (ಶುಕ್ರವಾರ) – ಮೊಹರಂ ಹಬ್ಬ
ಜೂನ್ 27 (ನಾಲ್ಕನೇ ಶನಿವಾರ) – ಬ್ಯಾಂಕ್ ರಜೆ
ಜೂನ್ 28 (ಭಾನುವಾರ) – ವಾರಾಂತ್ಯ ರಜೆ
ಜೂನ್ 29 (ಸೋಮವಾರ) – ಸಂತ ಗುರು ಕಬೀರ್ ಜಯಂತಿ (ಹಿಮಾಚಲ ಪ್ರದೇಶ)
ಜೂನ್ 30 (ಮಂಗಳವಾರ) – ರೆಮ್ನಾ ನೀ (ಮಿಝೋರಾಂ)

ಕರ್ನಾಟಕದಲ್ಲಿ ಜೂನ್ ತಿಂಗಳ ಬ್ಯಾಂಕ್ ರಜೆಗಳು

ಕರ್ನಾಟಕದಲ್ಲಿ ಬ್ಯಾಂಕುಗಳು ಈ ಕೆಳಗಿನ 7 ದಿನಗಳು ಬಂದ್ ಆಗಿರಲಿವೆ:

ಜೂನ್ 7 – ಭಾನುವಾರ
ಜೂನ್ 13 – ಎರಡನೇ ಶನಿವಾರ
ಜೂನ್ 14 – ಭಾನುವಾರ
ಜೂನ್ 21 – ಭಾನುವಾರ
ಜೂನ್ 26 – ಮೊಹರಂ
ಜೂನ್ 27 – ನಾಲ್ಕನೇ ಶನಿವಾರ
ಜೂನ್ 28 – ಭಾನುವಾರ

ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಲಭ್ಯ

ಬ್ಯಾಂಕ್ ರಜೆ ಇರುವ ದಿನಗಳಲ್ಲಿ ಶಾಖೆಗಳು ಕಾರ್ಯನಿರ್ವಹಿಸುವುದಿಲ್ಲ. ಆದರೆ ಯುಪಿಐ, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಐಎಂಪಿಎಸ್, ಎನ್‌ಇಎಫ್‌ಟಿ ಸೇರಿದಂತೆ ಹೆಚ್ಚಿನ ಡಿಜಿಟಲ್ ಸೇವೆಗಳು ಎಂದಿನಂತೆ ಲಭ್ಯ ಇರುತ್ತವೆ. ಎಟಿಎಂ ಸೇವೆಗಳೂ 24 ಗಂಟೆ ಕಾರ್ಯನಿರ್ವಹಿಸಲಿವೆ.

ಆದರೆ ಹೊಸ ಖಾತೆ ತೆರೆಯುವುದು, ಡಿಡಿ ಪಡೆಯುವುದು, ಕೆವೈಸಿ ಅಪ್‌ಡೇಟ್, ದೊಡ್ಡ ಮೊತ್ತದ ನಗದು ವ್ಯವಹಾರಗಳು ಸೇರಿದಂತೆ ಶಾಖೆಗೆ ಭೇಟಿ ಅಗತ್ಯವಿರುವ ಕೆಲಸಗಳನ್ನು ಮುಂಚಿತವಾಗಿ ಪೂರ್ಣಗೊಳಿಸುವುದು ಉತ್ತಮ.

LEAVE A REPLY

Please enter your comment!
Please enter your name here