ಬಂಟ್ವಾಳ : ರುದ್ರಪಠಣ ಸಮಿತಿ ಬಂಟ್ವಾಳ ಇವರ ವತಿಯಿಂದ ಶ್ರೀ ಸಾಂಬಸದಾಶಿವ ದೇವಸ್ಥಾನ, ಬಾರ್ದಿಲ ಕಿಲೆಂ ಜಾರು ಕುಪ್ಪೆ ಪದವು ಕ್ಷೇತ್ರದಲ್ಲಿ ಭಕ್ತಿ ಭಾವಪೂರ್ಣವಾಗಿ ಸಾಮೂಹಿಕ ಶ್ರೀ ರುದ್ರ ನಮಕ-ಚಮಕ ಸೂಕ್ತ ಪಠಣ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ರುದ್ರ ನಮಕ-ಚಮಕ ಸೂಕ್ತ, ಅಥರ್ವಶೀರ್ಷ ಸೂಕ್ತ, ಗಣಪತಿ ಸೂಕ್ತ, ಭಾಗ್ಯ ಸೂಕ್ತ, ದೇವಿ ಸೂಕ್ತ, ಸೌರ ಸೂಕ್ತ, ಮನ್ಯು ಸೂಕ್ತ, ಆಗಮರ್ಷಣ ಸೂಕ್ತ ಹಾಗೂ ಮಂತ್ರಪುಷ್ಪ ಸೇರಿದಂತೆ ವಿವಿಧ ವೇದ ಸೂಕ್ತಗಳನ್ನು ಭಕ್ತರು ಸಾಮೂಹಿಕವಾಗಿ ಪಠಿಸಿದರು.
ಕಾರ್ಯಕ್ರಮದಲ್ಲಿ ಸಜೀಪಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಎ. ರವಿಶಂಕರ ಮೈಯ್ಯ, ಕೂಟ ಮಹಾ ಜಗತ್ತು ಪೊಳಲಿ ಅಂಗ ಸಂಸ್ಥೆಯ ಅಧ್ಯಕ್ಷ ವಿನಾಯಕ ಕಾರಂತ, ದೇವಾಲಯದ ಅರ್ಚಕರಾದ ರಾಘವೇಂದ್ರ ಕಾರಂತ, ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸೀತಾರಾಮ ಮೈಯ್ಯ, ಕೆ. ರಾಜರಾಮ ಮೈಯ್ಯ, ಕೃಷ್ಣ ಸೋಮಯಾಜಿ ಅರ್ಬಿ, ಶಾಂತರಾಮ ಮೈಯ್ಯ, ಚಂದ್ರಮೋಹನ ರಾವ್, ರಾಮಚಂದ್ರಮಯ್ಯ, ಶ್ರವಣಕುಮಾರ, ಎ. ದನೇಶ್ವರ ರಾವ್, ಶ್ರೀನಿವಾಸ ಹೊಳ್ಳ ಕೆ., ವಿಶಾಲ ಹೆಗ್ಡೆ, ದೇವಾಲಯದ ಆಡಳಿತ ಸಮಿತಿಯ ಕೋಶಾಧಿಕಾರಿ ತಿಮ್ಮಪ್ಪ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವು ಭಕ್ತರ ಸಕ್ರಿಯ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ನೆರವೇರಿದ್ದು, ಕ್ಷೇತ್ರದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಾತಾವರಣ ನಿರ್ಮಾಣಗೊಂಡಿತು.

