ಹಸುಗಳ ಮಾರಾಟ ಆರೋಪ: ಪ್ರಕರಣ ದಾಖಲು ವಿಳಂಬ ಖಂಡಿಸಿ ಡಿವೈಎಸ್‌ಪಿ ಭೇಟಿ ಮಾಡಿದ ಹಿಂದು ಜಾಗರಣ ವೇದಿಕೆ

0
33

ದೂರು ನೀಡಿ 6 ದಿನ ಕಳೆದರೂ ಎಫ್‌ಐಆರ್ ಇಲ್ಲ; ಪೊಲೀಸ್ ಇಲಾಖೆಯ ಗಮನಕ್ಕೆ ತಂದ ಹಿಂದು ಜಾಗರಣ ವೇದಿಕೆ

ಕಾರಿಂಜ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯನ ವಿರುದ್ಧ ಕ್ರಮಕ್ಕೆ ಆಗ್ರಹ

ಬಂಟ್ವಾಳ : ಶ್ರೀ ಕ್ಷೇತ್ರ ಕಾರಿಂಜ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಯ ಸದಸ್ಯನಾದ ಪ್ರಶಾಂತ್ ನಾಯ್ಕ್ ನೆಲ್ಲಿಗುಡ್ಡೆ ಎಂಬಾತ ಸಾರ್ವಜನಿಕರಿಗೆ ಮೋಸ ಮಾಡಿ ಹಸುಗಳನ್ನು ಮಾರಾಟ ಮಾಡಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಮನೆಯವರು ದೂರು ನೀಡಿದ್ದರು.

ದೂರು ನೀಡಿ 6 ದಿನ ಕಳೆದರೂ ಪ್ರಕರಣ ದಾಖಲು ಮಾಡದ ಕಾರಣ ಹಿಂದು ಜಾಗರಣ ವೇದಿಕೆಯ ಪ್ರಮುಖರು ಬಂಟ್ವಾಳ ವಿಭಾಗ ಉಪ ಪೊಲೀಸ್ ಅಧೀಕ್ಷಕರನ್ನು ಬೇಟಿ ಮಾಡಲಾಯಿತು .

ಈ ಸಮಯದಲ್ಲಿ ಹಿಂದು ಜಾಗರಣ ವೇದಿಕೆಯ ನ್ಯಾಯ ಜಾಗರಣ ಪ್ರಮುಖ್ ವಕೀಲರಾದ ರಾಜೇಶ್ ಬೊಲ್ಲುಕಲ್ಲು , ಪ್ರಾಂತ ಕಾರ್ಯಕಾರಿಣಿ ಸದಸ್ಯ ಪ್ರಶಾಂತ್ ಕೆಂಪುಗುಡ್ಡೆ, , ಜಿಲ್ಲಾ ಸಂಯೋಜಕ ನರಸಿಂಹ ಮಾಣಿ, ಪ್ರಮುಖರಾದ ಪುಷ್ಪರಾಜ್ ಕಮ್ಮಾಜೆ, ಅನೂಪ್ ಮಯ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here