ಜೆಸಿಐ ಕಾಪು ಆತಿಥ್ಯದಲ್ಲಿ ನಡೆದ ವಲಯ ಮಧ್ಯಂತರ ಸಮ್ಮೇಳನ * “ಸಂಗಮ 2026″*ರಲ್ಲಿ ಜೆಸಿಐ ಪರ್ಕಳ ಘಟಕವು ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದು ಗಮನ ಸೆಳೆಯಿತು.
ಘಟಕವು ಅತ್ಯುತ್ತಮ ಯೋಜನೆ (Outstanding Project Winner) ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಅತ್ಯುತ್ತಮ ಸ್ಥಳೀಯ ಸಂಸ್ಥೆ (Outstanding Local Organization Runner-Up) ವಿಭಾಗದಲ್ಲಿ ರನ್ನರ್-ಅಪ್ ಸ್ಥಾನವನ್ನು ಗಳಿಸಿದೆ. ಅಲ್ಲದೆ, ಘಟಕದ ಅಧ್ಯಕ್ಷರಿಗೆ ಡೈಮಂಡ್ ಸ್ಟಾರ್ ಪ್ರೆಸಿಡೆಂಟ್ ಅವಾರ್ಡ್ ಲಭಿಸಿದೆ.
ಇದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳಿಗಾಗಿ ಹಲವಾರು ಏರಿಯಾ ಪ್ರೋಗ್ರಾಂ ಪ್ರಶಸ್ತಿಗಳು ಹಾಗೂ ಶಿಫಾರಸುಗಳು ದೊರೆತಿವೆ. ಈ ಸಾಧನೆ ಘಟಕದ ಎಲ್ಲಾ ಸದಸ್ಯರ ಒಗ್ಗಟ್ಟು, ಸಮರ್ಪಣೆ ಹಾಗೂ ನಿರಂತರ ಸೇವೆಯ ಫಲವಾಗಿದೆ.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಸಂತಸ ವ್ಯಕ್ತಪಡಿಸಿದ್ದು, ಘಟಕದ ಬೆಳವಣಿಗೆಗೆ ಸಹಕರಿಸಿದ ಎಲ್ಲ ಸದಸ್ಯರು, ಹಿರಿಯರು ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಪ್ರಶಸ್ತಿಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರೇರಣೆಯಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.

