ಉಡುಪಿ : ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮದ 134ನೇ ಅವೃತ್ತಿಯ ರಾಜ್ಯ ಮಟ್ಟದ ನೇರ ಪ್ರಸಾರದ ವೀಕ್ಷಣೆಯು ಮೇ 31ರಂದು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ನೇತೃತ್ವದಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಸಂಯೋಜನೆಯಲ್ಲಿ ವಿವಿಧ ಚರ್ಚ್ ಗಳ ಧರ್ಮ ಗುರುಗಳು, ಭಗಿನಿಯರು ಮತ್ತು ಅಲ್ಪಸಂಖ್ಯಾತ ಸಮುದಾಯದ ಪ್ರಮುಖರ ಉಪಸ್ಥಿತಿಯಲ್ಲಿ ಅಧಿಕೃತ ವೀಕ್ಷಣಾ ಕೇಂದ್ರ ಉಡುಪಿ ಕಕ್ಕುಂಜೆಯ ಪಾಸ್ಟರಲ್ ಸೆಂಟರ್ ‘ಅನುಗ್ರಹ’ದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶಾಸಕರುಗಳಾದ ಸುರೇಶ್ ಶೆಟ್ಟಿ ಗುರ್ಮೆ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯರುಗಳಾದ ಡಾ! ಧನಂಜಯ ಸರ್ಜಿ, ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಡಾ! ಅನಿಲ್ ತೋಮಸ್, ಜಿಲ್ಲಾಧ್ಯಕ್ಷ ರುಡಾಲ್ಫ್ ಡಿ’ಸೋಜಾ, ರಾಜ್ಯ ಕಾರ್ಯದರ್ಶಿ ಜೆಸೇಲ್ ಡಿಸೋಜ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಎಸ್ ಕುಂದರ್, ‘ಮನ್ ಕೀ ಬಾತ್’ ಜಿಲ್ಲಾ ಸಂಚಾಲಕ ಶಿವಕುಮಾರ್ ಅಂಬಲಪಾಡಿ, ಕಲ್ಯಾಣಪುರ ಚರ್ಚಿನ ಫಾ! ಫ್ರಾನ್ಸಿಸ್ ಲೂಯಿಸ್, ಫಾಸ್ಟರಲ್ ಸೆಂಟರ್ ನಿರ್ದೇಶಕ ಫಾ! ವಿನ್ಸೆಂಟ್ ಕ್ರಾಸ್ಟ, ಸಂಪದ ಸಂಚಾಲಕ ಫಾ! ರೆಜಿನಾಲ್ಡ್, ಸಾಸ್ತಾನ ಚರ್ಚಿನ ಫಾ! ಸುನೀಲ್, ಸಹಿತ ಹಲವು ಧರ್ಮ ಗುರುಗಳು, ಧರ್ಮ ಭಗಿನಿಯರು, ಕೆಥೋಲಿಕ್ ಸಭಾ ಉಡುಪಿ ಜಿಲ್ಲಾಧ್ಯಕ್ಷ ಮೆಲ್ವಿನ್ ಅರಾನ್ಹ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಮಲಾಕ್ಷ ಹೆಬ್ಬಾರ್, ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಪ್ರಮುಖರಾದ ಸಲೀಂ ಅಂಬಾಗಿಲು, ಹರೀಶ್ ಶೆಟ್ಟಿ ಚೇರ್ಕಾಡಿ, ಬಾಲಕೃಷ್ಣ ಶೆಟ್ಟಿ, ಹರೀಶ್ ಶೆಟ್ಟಿ, ಟಿ.ಜಿ. ಹೆಗ್ಡೆ, ಗಿರಿಧರ್ ಆಚಾರ್ಯ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪದಾಧಿಕಾರಿಗಳಾದ ಶೇಕ್ ಆಸಿಫ್, ಮೊಹಮ್ಮದ್ ಆಫ್ಸರ್, ಮೈಕಲ್ ಡಿಸೋಜ, ಗ್ಲೆನ್ ಮೋನಿಸ್, ನವೀನ್ ಡಿಸೋಜ, ನೋಯೆಲ್ ಮಣಿಪಾಲ್, ಜಾನ್ಸನ್ ಕಲ್ಯಾಣಪುರ, ಜೋಯೆಲ್ ಮೆoಡೋನ್ಸಾ, ಅನಿತಾ ಬಿಲಿಂಡ ಡಿಸೋಜ, ಸುನೀತಾ ಡಿಸೋಜ, ಇಜಾದ್ ಕಾರ್ಕಳ ಹಾಗೂ ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.

