ಗುರುವಾಯನಕೆರೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಆರೋಪ: ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ

0
8

ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಡಿ ವೀರೇಂದ್ರ ಹೆಗ್ಗಡೆ ಯವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಇತೀಚೆಗೆ ಆರು ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿದ್ದ ಗುರುವಾಯನಕೆರೆ ನಿವಾಸಿ ಸೋಮನಾಥ ನಾಯಕ ಎಂಬಾತ ಜೈಲಿನಿಂದ ಬಂದ ಮೇಲೂ ಅದೇ ಚಾಳಿ ಮುಂದುವರೆಸಿದ್ದ. ಗಣ್ಯರ ಮೇಲೆ ಅನಗತ್ಯ ಕೇಸು ದಾಖಲಿಸಿ ಕಿರುಕುಳ ನೀಡುವ ಆತನೇ ಎರಡು ಎಕ್ರೆ ಸರಕಾರಿ ಜಮೀನನ್ನು ಒತ್ತುವರಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಸರಕಾರಿ ಎರಡು ಎಕರೆ ಭೂಮಿಯನ್ನು ಒತ್ತುವರಿ ಮಾಡಿ ಅದಕ್ಕೆ ಬೇಲಿ ಹಾಕಿ ಲೇಔಟ್ ಮಾಡುವ ಉದ್ದೇಶದಿಂದ ಈಗಾಗಲೇ ಪತ್ರಿಕೆಗಳಲ್ಲಿ ಜಾಹಿರಾತು ನೀಡಿರುತ್ತಾನೆ.
ಸೋಮನಾಥ ನಾಯಕನ ಅಕ್ರಮ ತಿಳಿದ ಸ್ಥಳೀಯರು ಆತನ ಮೇಲೆ ಭೂ ಕಬಳಿಕೆ ನಿಷೇದ ವಿಶೇಷ ನ್ಯಾಯಾಲಯ ದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಆತನಿಗೆ ಬೆಳ್ತಂಗಡಿ ಪೊಲೀಸ್ ಮೂಲಕ ಸಮನ್ಸ್ ಜಾರಿಯಾಗಿದೆ.
ಅಲ್ಲದೇ ಈ ಬಗ್ಗೆ ಪರಿಶೀಲನೆ ಮಾಡಿ ವರದಿ ನೀಡುವಂತೆ ಬೆಳ್ತಂಗಡಿ ತಹಸೀಲ್ದಾರ್ ರವರಿಗೂ ಮಾಹಿತಿ ಹೋಗಿದೆ. ಈ ಪ್ರಕರಣದಲ್ಲಿ ಆರೋಪಿ ಸೋಮನಾಥ ನಾಯಕ ನಿಗೆ ಮೂರು ವರ್ಷ ಜೈಲಾಗುವ ಸಾಧ್ಯತೆ ಇದೆ.
ಶ್ರೀ ವೀರೇಂದ್ರ ಹೆಗ್ಗಡೆ ಯವರ ಮೇಲೆ ವೈಯುಕ್ತಿಕ ಹಗೆ ಸಾದಿಸುವ ಈತನ ಇನ್ನೂ ಅನೇಕ ಪ್ರಕರಣ ಹೊರಗಡೆ ಬರಲಿದೆ.
ಇದಲ್ಲದೇ ಆತ ಸರಕಾರಿ ಖಜಾನೆಗೆ 14 ಕೋಟಿ ರೂ ನಷ್ಟು ನಷ್ಟ ಉಂಟು ಮಾಡಿರುವ ಬಗ್ಗೆ ಇನ್ನೊಂದು ಪ್ರಕರಣ ಸಂಬಂದಿಸಿದ ಇಲಾಖೆಯಲ್ಲಿ ದೂರು ದಾಖಲಾದ ಬಗ್ಗೆ ಮಾಹಿತಿ ಲಭ್ಯ ವಾಗಿದೆ.

ಓರ್ವ ಗೋ ಮುಖ ವ್ಯಾಘ್ರ ಹೇಗಿರುತ್ತಾನೆ ಅಂದರೆ ಅದಕ್ಕೆ ಉದಾಹರಣೆ ಗುರುವಾಯನಕೆರೆ ನಿವಾಸಿ ಸೋಮನಾಥ ನಾಯಕ.

LEAVE A REPLY

Please enter your comment!
Please enter your name here