ಕಲಾಕುಂಚದ ಕುರಿತು ರಾಜ್ಯ ಮಟ್ಟದ ಉಚಿತ ಕವನ ಸ್ಪರ್ಧೆಗೆ ಆಹ್ವಾನ

0
27

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಕಲಾಕುಂಚದ ಕುರಿತು ರಾಜ್ಯ ಮಟ್ಟದ ಉಚಿತ ಕವನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷರಾದ ವಾಸುದೇವ ಲಕ್ಷ್ಮ ಣ್ ರಾಯ್ಕರ್ ತಿಳಿಸಿದ್ದಾರೆ.
ಕಲಾಕುಂಚ ಸಂಸ್ಥೆ ಕಳೆದ 36 ವರ್ಷಗಳಿಂದ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಯಕ್ಷಗಾನ ಹೀಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ಕಠಿಣ ಪರಿಶ್ರಮದಿಂದ ನಡೆಯುತ್ತಿದ್ದು ಈ ಸಂಸ್ಥೆಯ ಬಗ್ಗೆ 15 ರಿಂದ 20 ಸಾಲುಗಳು ಶಿರ್ಷಿಕೆಯೊಂದಿಗೆ ಕವನ ಬರೆದು ತೀರ್ಪುಗಾರರಾದ ಸಾಹಿತಿಗಳು, ಕವಯತ್ರಿಯಾದ ಡಾ|| ಆರತಿ ಸುಂದರೇಶ್ ಪ್ರಕಟಿಸಿದ್ದಾರೆ. ಈ ಕೆಳಗಿನ ವ್ಯಾಟ್ಸಪ್ ಸಂಖ್ಯೆಗೆ ಕವನ ರಚಿಸಿ ಅವರ ಹೆಸರು ಮನೆಯ ಪೂರ್ಣ ಪ್ರಮಾಣದ ವಿಳಾಸ ವ್ಯಾಟ್ಸಪ್ ಸಂಖ್ಯೆಯೊAದಿಗೆ ಕಳಿಸಬೇಕಾಗಿ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.
ಕವನ ರಚಿಸಿ ಕಳಿಸುವ ವ್ಯಾಟ್ಸಪ್ ನಂಬರ್ 9448005126 ಯಾವುದೇ ಸಭೆ-ಸಮಾರಂಭಗಳು ಇಲ್ಲದೇ ಈ ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅವರವರ ವ್ಯಾಟ್ಸಪ್ ಸಂಖ್ಯೆಗೆ ಫಲಿತಾಂಶ, ಅಭಿನಂದನಾ ಪತ್ರ ಕಳಿಸುತ್ತೇವೆ. ಕವನ ರಚಿಸಿ ಕಳಿಸುವ ಕೊನೆಯ ದಿನಾಂಕ 30-6-2026 ಹೆಚ್ಚನ ಮಾಹಿತಿಗೆ 9945785170 ಈ ಸನೀಹವಾಣಿಗೆ ಸಂಪರ್ಕಿಸಬಹುದು. ಎಂದು ಕಲಾಕುಂಚ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here