ಮೂಡುಬಿದಿರೆ : ಭಾರತೀಯ ಸೇನೆಯ ಅಗ್ನಿವೀರ್ ಜಿಡಿ (Agniveer GD) ಹುದ್ದೆಗೆ ಮೂಡುಬಿದಿರೆ ತಾಲೂಕಿನ ಪಣಪಿಲ ಗ್ರಾಮದ ಕೆ. ವಿರಾಜ್ ಪೂಜಾರಿ ಆಯ್ಕೆಯಾಗಿದ್ದಾರೆ.
ಸೇನೆಯಂತಹ ಪ್ರತಿಷ್ಠಿತ ಸೇವಾ ಕ್ಷೇತ್ರಕ್ಕೆ ಆಯ್ಕೆಯಾಗಿರುವ ವಿರಾಜ್ ಪೂಜಾರಿ ಅವರ ಸಾಧನೆ ಯುವಜನತೆಗೆ ಪ್ರೇರಣೆಯಾಗಿದ್ದಾರೆ. ವಿರಾಜ್ ಪೂಜಾರಿ ಅವರು ದೇಶಸೇವೆಯ ಕನಸನ್ನು ನನಸಾಗಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಭಾರತೀಯ ಸೇನೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ಇನ್ನಷ್ಟು ಉನ್ನತ ಸಾಧನೆ ಮಾಡಲಿ.

