ಉಡುಪಿ ಜಿಲ್ಲಾ ಬಿಜೆಪಿಯ ವಿವಿಧ ಪ್ರಕೋಷ್ಠಗಳ ಸಂಚಾಲಕರು ಮತ್ತು ಸಹ ಸಂಚಾಲಕರುಗಳ ನಿಯುಕ್ತಿ

0
10

ಉಡುಪಿ : ಜಿಲ್ಲಾ ಬಿಜೆಪಿಯ ವಿವಿಧ ಪ್ರಕೋಷ್ಠಗಳ ಸಂಚಾಲಕರುಗಳು ಮತ್ತು ಸಹ ಸಂಚಾಲಕರುಗಳನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಅನುಮೋದನೆ ಮೇರೆಗೆ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರುಗಳಾದ ದಿಲ್ಲೇಶ್ ಶೆಟ್ಟಿ ಬೆಳ್ಳಂಪಳ್ಳಿ ಮತ್ತು ವಿಜಯ ಕೊಡವೂರು ಅವರು ನಿಯುಕ್ತಿಗೊಳಿಸಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.

ಸಹಕಾರ ಪ್ರಕೋಷ್ಠದ ಸಂಚಾಲಕರಾಗಿ ಕುತ್ಯಾರು ಪ್ರಸಾದ್ ಶೆಟ್ಟಿ, ಸಹ ಸಂಚಾಲಕರಾಗಿ ಮಹೇಶ್ ನಾಯಕ್, ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಠ ಸಂಚಾಲಕರಾಗಿ ಗೋಪಾಲ್ ಕಾಂಚನ್, ಸಹ ಸಂಚಾಲಕರಾಗಿ ಮಹೇಂದ್ರ ಕುಮಾರ್ ನೀಲಾವರ, ಪ್ರಬುದ್ಧರ ಪ್ರಕೋಷ್ಠದ ಸಂಚಾಲಕರಾಗಿ ಸೂರ್ಯಕಾಂತ್ ಶೆಟ್ಟಿ ಕೆದಿಂಜೆ, ಸಹ ಸಂಚಾಲಕರಾಗಿ ಸೂರಜ್ ಜೈನ್, ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕರಾಗಿ ಅರುಣ್ ಕುಮಾರ್ ಬಾಣ, ಸಹ ಸಂಚಾಲಕರಾಗಿ ಕೆ.ಸತೀಶ್ ಬಾರಿಕೆರೆ, ಸಾಂಸ್ಕೃತಿಕ ಪ್ರಕೋಷ್ಠದ ಸಂಚಾಲಕರಾಗಿ ಗಣೇಶ್ ಬ್ರಹ್ಮಾವರ, ಸಹ ಸಂಚಾಲಕರಾಗಿ ದಿವಾಕರ ಶೆಟ್ಟಿ, ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕರಾಗಿ ಕೆ.ಬಿ. ಶೆಟ್ಟಿ ಕುಂದಾಪುರ, ಸಹ ಸಂಚಾಲಕರಾಗಿ ಶ್ಯಾಮ್ ಪ್ರಸಾದ್ ಕುಡ್ವ, ಶಿಕ್ಷಣ ಪ್ರಕೋಷ್ಠದ ಸಂಚಾಲಕರಾಗಿ ಮಿತೇಶ್ ಕಲ್ಮಾಡಿ, ಸಹ ಸಂಚಾಲಕರಾಗಿ ಮಹೇಶ್ ಕುಮಾರ್ ಇವರುಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here