ಭದ್ರಗಿರಿ ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿ ಆಷಾಢ ಏಕಾದಶಿ ಅಖಂಡ ಏಕಾಹ ಭಜನಾ ಮಹೋತ್ಸವ ಸಂಪನ್ನ

0
8

ದಕ್ಷಿಣ ಪಂಢರಾಪುರ ಖ್ಯಾತಿಯ ಭದ್ರಗಿರಿ ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆದು ಬರುತ್ತಿರುವ ಆಷಾಢ  ಏಕಾದಶಿಯ ಅಖಂಡ ಭಜನಾ ಏಕಾಹ ಮಹೋತ್ಸವವು ಶ್ರೀ ದೇವತಾ ಪ್ರಾರ್ಥನೆ ಮತ್ತು ದೀಪ ಪ್ರಜ್ವಾಲನದಿಂದ ಬೆಳಿಗ್ಗೆ  ಪ್ರಾರಂಭಗೊಂಡಿತು.

ಈ ಸಂದರ್ಭದಲ್ಲಿ  ಆಡಳಿತೆ ಮೊಕ್ತೇಸರ ಭದ್ರಗಿರಿ ಪಾಂಡುರಂಗ ಆಚಾರ್ಯ,  ಆಡಳಿತ ಮತ್ತು ವಿಶ್ವಸ್ಥ ಮಂಡಳಿಯ  ಸದಸ್ಯರಾದ  ಗಣೇಶ ಜಿ ಪೈ, ಗಿರಿಧರ ರಾವ್ , ಕೆ ಸಿ ಪ್ರಭು, ಭದ್ರಗಿರಿ ವಿಠ್ಠಲದಾಸ ಆಚಾರ್ಯ,ಭದ್ರಗಿರಿ ಮಹೇಶ ಆಚಾರ್ಯ ಭದ್ರಗಿರಿ ವೀರವಿಠ್ಠಲ ಭಜನಾ ಮಂಡಳಿಯ ಸದಸ್ಯರಾದ  ಸಿ.ಕೃಷ್ಣ ಪೈ, ಕೆ.ಪಿ.ಕಿಣಿ ,ಯೋಗಿಶ ಪೈ, ರಾಮನಾಥ ಶಾನುಭಾಗ್, ದೇವದಾಸ ನಾಯಕ್ ಪುರೋಹಿತರಾದ ವೇದಮೂರ್ತಿ ಕಲ್ಯಾಣಪುರ ಕಾಶೀನಾಥ  ಭಟ್, ಕೃಷ್ಣಾನಂದ ಶರ್ಮ  ಮತ್ತು ಅರ್ಚಕರಾದ ಸದಾನಂದ ಆಚಾರ್ಯ ಹಾಗೂ ಗಣೇಶ ಭಟ್,ವಿವೇಕ ನಾಯಕ ಮತ್ತಿತರ  ಭಜಕರು ಉಪಸ್ಥಿತರಿದ್ದರು .ಅಖಂಡ ಭಜನಾ ಮಹೋತ್ಸವದಲ್ಲಿ ಊರ ಪರ ಊರಿನ  13  ಭಜನಾ ಮಂಡಳಿಗಳು ಪಾಲ್ಗೊಂಡು  ಭಜನಾ ಸೇವೆ ಸಲ್ಲಿಸಿದವು.ರಾತ್ರಿಯ ಪ್ರಸನ್ನಪೂಜೆಯಿಂದ  ಭಜನಾ ಮಂಗಲೋತ್ಸವ ಸಂಪನ್ನಗೊಂಡಿತು.