ರಾಮಕ್ಷತ್ರಿಯ ಸಮಾಜದ ನಾಲ್ವರು ಗಣ್ಯರಿಗೆ ‘ ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾ ನಂದ ಸ್ವಾಮೀಜಿ “ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ “

0
66

ಕಾಸರಗೋಡು : ವಿಶ್ವ ರಾಮಕ್ಷತ್ರಿಯ ಮಹಾಸಂಘ (ರಿ.) ಕುಂದಾಪುರ ಇದರ ಅಧ್ಯಕ್ಷರು ಹಾಗೂ ಸಮಾಜ ಸೇವಕ, ಹಿರಿಯ ಸಂಘಟಕ ಎಚ್. ಆರ್ ಶಶಿಧರ್ ನಾಯ್ಕ್, ಉದ್ಯಮಿ, ಸಮಾಜಸೇವಕ, ವಿಶ್ವ ಸಂಘ ಉಪಾಧ್ಯಕ್ಷರಾದ ನಾಗರಾಜ್ ಕಲ್ಪತರು ಕುಂದಾಪುರ, ರಾಮಕ್ಷತ್ರಿಯ ಮಾಸಪತ್ರಿಕೆ ಸಂಪಾದಕರಾದ ಮಹಾಸಂಘ ಉಪಾಧ್ಯಕ್ಷರಾದ ಬಿ. ಎಮ್ ನಾಥ್ ಬೆಂಗಳೂರು, ವಿಶ್ವ ಮಹಾಸಂಘ ಕೋಶಾಧಿಕಾರಿ, ಧಾರ್ಮಿಕ ಮುಖಂಡ ಕರುಣಾಕರ ಉಡುಪಿ ಈ ಮೇಲಿನ ನಾಲ್ಕು ಮಂದಿಯ ಶ್ರೇಷ್ಠ ಸಮುದಾಯಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಸರ್ವತೋಮುಖ ಸಾಧನೆಯನ್ನು ಪರಿಗಣಿಸಿ, ಇವರೀಗೆ, ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾರಾಣಿ ಟೀಚರ್ ಸಾರತ್ಯದ ಕಾಸರಗೋಡು ಕನ್ನಡ ಭವನವು ಇವರೀಗೆ ಪ್ರಶಸ್ತಿ ನೀಡಿ ಗೌರವಿಸಿತು.

ರಾಮಕ್ಷತ್ರಿಯ ಸಮಾಜಕ್ಕೆ 1932ರಲ್ಲಿ ಸಾಮಾಜಿಕ ಭೋಧನೆಯನ್ನು ನೀಡಿ ಸಂಘಟನೆಯ ಮೂಲಕ ಒಗ್ಗಟ್ಟಾಗಿ ಪರಿಶ್ರಮಿಸಿ ಎಂದು ಬೋದಿಸಿ “ರಾಮರಾಜ ಕ್ಷತ್ರಿಯ ಸೇವಾ ಸಂಘ “ಎಂಬ ಸಂಘವನ್ನು ಮಂಗಳೂರಿನಲ್ಲಿ ಪರಿಷತ್ತು ನಡೆಸಿ ಕಟ್ಟಿ ಪ್ರಥಮ ಅಧ್ಯಕ್ಷರಾಗಿ ಸಮಾಜಕ್ಕೆ ಮಾರ್ಗ ದರ್ಶನ ನೀಡಿದ ಪರಮ ಪೂಜ್ಯ ಭಿಕ್ಷು ಲಕ್ಷ್ಮಣಾನಂದ ಸ್ವಾಮಿಗಳ ಹೆಸರು, ನೆನಪು, ಆದರ್ಶ ಬೋಧನೆ ಯನ್ನು ಅಜರಾಮರವನ್ನಾಗಿಸುವ ಸಲುವಾಗಿ ಕನ್ನಡ ಭವನದಿಂದ ಈ ಪ್ರಶಸ್ತಿ ಯನ್ನು ಸಮಾಜದ ಅತ್ಯಂತ ಹಿರಿಯ ಸೂಕ್ತ ವ್ಯಕ್ತಿಗಳನ್ನು ಆರಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರಶಸ್ತಿ ನೀಡಿದ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹೇಳಿದರು.

ವಿಶ್ವ ರಾಮಕ್ಷತ್ರಿಯ ಮಹಾಸಂಘದ ಕೇಂದ್ರ ಕಚೇರಿ ಕುಂದಾಪುರ ದಲ್ಲಿ ಉದ್ಘಾಟಿಸಿದ ಕಾರ್ಯಕ್ರಮ ದಲ್ಲಿ ಈ ಪ್ರಶಸ್ತಿ ನೀಡಲಾಯಿತು. ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಶಿವರಾಮ ಕಾಸರಗೋಡು, ಕನ್ನಡ ಭವನ ದ. ಕ. ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ಚಂದ್ರ ತೊಕ್ಕೋಟು, ಕನ್ನಡ ಭವನ ನಿರ್ದೇಶಕರಾದ ನಾಗರಾಜ್ ಮದ್ದೋಡಿ ಮಂಗಳೂರು, ಕನ್ನಡ ಭವನ ಪ್ರಕಾಶನದ ಸಂದ್ಯಾ ರಾಣಿ ಟೀಚರ್ ಪ್ರಶಸ್ತಿ ಪ್ರದಾನ ಮಾಡಿದರು.

ವಿಶ್ವ ರಾಮಕ್ಷತ್ರಿಯ ಮಹಾಸಂಘ ಅಧ್ಯಕ್ಷರಾದ ಎಚ್ ಆರ್ ಶಶಿಧರ್ ನಾಯ್ಕ್ ಅಧ್ಯಕ್ಷತೆಯಲ್ಲಿ ಪ್ರದಾನ ಕಾರ್ಯದರ್ಶಿ ಪಿ. ಎಸ್ ಶ್ರೀಧರ್, ಆಡಳಿತ ಕಾರ್ಯದರ್ಶಿ ರಶ್ಮಿ ರಾಜ್ ಕಾರ್ಯಕ್ರಮ ನಿರೂಪಿಸಿದರು. ಶಿವರಾಮ ಕಾಸರಗೋಡು ಪ್ರಶಸ್ತಿ ಪುರಸ್ಕೃತರ ಪರಿಚಯ ವಿವರಿಸಿದರು.

LEAVE A REPLY

Please enter your comment!
Please enter your name here