ಮೂಡಬಿದ್ರಿ : ತಾಲೂಕಿನ ತೋಡಾರ್ ಗ್ರಾಮದ ಕಾಪಿಕಾಡ್ ನ ಭಜನಾ ಮಂಡಳಿಯ ಸರಿ ಸುಮಾರು 27 ವಿದ್ಯಾರ್ಥಿಗಳಿಗೆ ಉದ್ಯಮಿ ಕೊಡುಗೈ ದಾನಿ ಹಲವಾರು ದೈವಸ್ಥಾನಗಳ ಜೀರ್ಣೋದ್ದಾರಕ್ಕೆ ಕೊಡುಗೆ ಗಳನ್ನು ನೀಡುತ್ತಾ ಬಂದಿರುವ ಅರುಣ್ ರೈ ತೋಡಾರು ಇವರ ನೇತೃತ್ವ ಮತ್ತು ಪ್ರಾಯೋಜಕತ್ವದಲ್ಲಿ ಸ್ಕೂಲ್ ಬ್ಯಾಗ್ ಮತ್ತು ಪರಿಕರಗಳನ್ನು ವಿತರಣೆ ಮಾಡಲಾಯಿತು.
ಸಭೆಯಲ್ಲಿ ಮಹಾಂಕಳಿ ದೈವಸ್ಥಾನದ ಗುರಿಕಾರರು ದಿನಕರ್ ಮತ್ತು ಗಂಗಾಧರ್ ಇವರ ಉಪಸ್ಥಿತಿಯಲ್ಲಿ ನಮ್ಮ ಮಕ್ಕಳ ಮೇಲಿರುವ ಮನೋಭಾವನೆಯನ್ನು ಮನಗಂಡು ದೇವರಲ್ಲಿ ಮತ್ತು ಶ್ರೀ ಕ್ಷೇತ್ರದ ಸರ್ವ ಶಕ್ತಿ ಗಳಲ್ಲಿ ಅರುಣ್ ರೈ ಅವರ ಉದ್ಯಮ ಇನ್ನಷ್ಟು ಅಭಿವೃದ್ಧಿಗಾಗಿ ಮತ್ತು ಆರೋಗ್ಯ ಸಂಪತಿಗಾಗಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಸಭೆಯಲ್ಲಿ ಭಜನಾ ತರಬೇತುದಾರಾದ ಪ್ರವೀಣ್. ಆರ್. ಕೋಟ್ಯಾನ್ ಕೂಡ ಉಪಸ್ಥಿತರಿದ್ದು ಮಕ್ಕಳಿಗೆ ಮತ್ತು ಪೋಷಕರಿಗೆ ಶುಭವನ್ನು ಹಾರೈಸಿದರು. ಮಾಸಿಕ ಸಭೆಯಲ್ಲಿ ಭಜನಾ ಮಂಡಳಿಯ ಮುಂದಿನ ಪ್ರಗತಿಯ ಬಗ್ಗೆ ಕೇಳಲಾದ ಪ್ರಶ್ನೆ ಗೆ ಉತ್ತರಿಸಿದ ತರಬೇತುದಾರದು ಕೆಲವೊಂದು ಕಾರ್ಯಕ್ರಮ, ಕಾರ್ಯಕ್ರಮ ಚಟುವಟಿಕೆಯ ಮತ್ತು ಶಿಸ್ತು ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಶ್ರೀ ಕ್ಷೇತ್ರ ದ ಸಮಿತಿಯ ಪದಾಧಿಕಾರಿಗಳು ಸದಸ್ಯರು ಮತ್ತು ಮಹಿಳಾ ಸಮಿತಿ ಅಧ್ಯಕ್ಷರು ಸದಸ್ಯರು ಮಕ್ಕಳ ಪೋಷಕರು ಉಪಸ್ಥಿತರಿದ್ದರು.

