ನಾ.ಡಿಸೋಜರವರ ಕಥಾ ಸಾಹಿತ್ಯದ ಹುಟ್ಟು

0
11

ಮಂಗಳೂರು : ನಾಡಿನ ಖ್ಯಾತ ಸಾಹಿತಿ ಹಾಗೂ ಕತೆಗಾರರಾದ ನಾಡಿಸೋಜರವರ 89ನೇ ಹುಟ್ಟು ಹಬ್ಬದ ಸಲುವಾಗಿ ಮಂಗಳೂರಿನ ಗಾಂಧಿನಗರ ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ನಾಡಿಸೋಜರವರ ಕಥೆ ಮತ್ತು ಸಾಹಿತ್ಯದ ಒಳ ಆಯಾಮವನ್ನುಅರಿವು ಮೂಡಿಸಲಾಯಿತು.

ನಾಡಿಸೋಜರವರು ಪ್ರಕೃತಿ, ಸಂಸ್ಕೃತಿ, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುತ್ತಾರೆ. ಅದರಲ್ಲಿ ‘ ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು ‘ ಇದರ ಹೂರಣವನ್ನು ಮಕ್ಕಳಿಗೆ ತಿಳಿಸಿ ಅವರಲ್ಲಿ ಸಂವಾದ, ರಸ ಪ್ರಶ್ನೆ, ಕಥಾ ರೂಪಕ ಮುಂತಾದವುಗಳನ್ನು ಮಾಡಿ ಬಹುಮಾನಗಳನ್ನು ನೀಡಲಾಯಿತು.

ನಾಡಿಸೋಜರ ಕಾವ್ಯ ಪ್ರಕಾರಗಳು ಮತ್ತು ಕಥಾ ರೂಪಗಳ ಸಂದೇಶ,ಜಾಗೃತಿ ಸದಾ ಸಮಾಜದಲ್ಲಿ ಬೆಳಗಬೇಕೆಂದು ಮಕ್ಕಳಿಗೆತಿಳಿಸಲಾಯಿತು.ನಾಡಿಸೋಜರ ಮಗಳು ಶೋಭಾ ನರೇಶ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಅವರು ಮಕ್ಕಳ ಜೊತೆ ಮಾತನಾಡಿದರು.

ಕಲಾವಿದ ದಿನೇಶ್ ಹೊಳ್ಳ, ಛಾಯಾಪತ್ರಕರ್ತ ಚಂದ್ರಹಾಸ್ ಕೋಟೆಕಾರ್, ಶಾಲಾ ಮುಖ್ಯ ಶಿಕ್ಷಕಿ ಕೆ. ನಳಿನಿ ಅತಿಥಿಗಳಾಗಿ ಭಾಗವಹಿಸಿದ್ದರು. ಶಿಕ್ಷಕಿ ಲಾವಣ್ಯ ಗಣೇಶ್, ಬಿಂದಿಯಾ, ನಾಡಿಸೋಜರವರ ಮಡದಿ ಫಿಲೋಮಿನ ಡಿಸೋಜ, ತಂಗಿ ಮೇರಿ ಡಿಸೋಜ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here