ನ್ಯಾಷನಲ್ ಸಬ್ -ಜೂನಿಯರ್ ಗೋಲ್ಡ್ ಮೆಡೆಲ್ ಪಡೆದ ಶಿವಾನಿಗೆ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಅಭಿನಂದನೆ

0
16

ಕಾಸರಗೋಡು: ರಾಮಕ್ಷತ್ರಿಯ ಸಮಾಜದ ಶಿವಾನಿ ಕಿರಣ್ ರಾವ್ ನ್ಯಾಷನಲ್ 20ಕಿಲೋ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಗೋಲ್ಡ್ ಮೆಡಲ್ ಪಡೆದು ಸಮಾಜಕ್ಕೆ ಹಾಗೂ ಕುಟುಂಬ ಕ್ಕೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ. ಇವರು ಕೆ. ಡಿ. ಎಫ್. ಕರಾಟೆ ಅಂಡ್ ಫಿಟ್ನೆಸ್ ಅಕಾಡೆಮಿ, ಕುಂದಾಪುರ ಇದರ ವಿದ್ಯಾರ್ಥಿಯಾಗಿದ್ದಾರೆ. ಇವರೀಗೆ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ದ ಹೆಮ್ಮೆಯ ಗೌರವ ಅಭಿನಂದನೆಗಳು. ಶಿವಾನಿಯ ಅಪ್ರತಿಮ ಸಾಧನೆ ಉಳಿದವರೇಗೆ ಪ್ರೇರಣೆಯಾಗಲಿ ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾಗಿರುವ ಡಾ. ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನ್ಯಾಷನಲ್ ಸಬ್ -ಜೂನಿಯರ್ ಕರಾಟೆ ಯಲ್ಲಿ ಗೋಲ್ಡ್ ಮೆಡೆಲ್ ಪಡೆದ ಶಿವಾನಿ ಯವರೀಗೆ ವಿಶ್ವ ರಾಮಕ್ಷತ್ರಿಯ ಮಹಾಸಂಘ ಅಧ್ಯಕ್ಷರಾದ ಎಚ್. ಆರ್, ಶಶಿಧರ್ ನಾಯ್ಕ್, ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ರೇಖಾ ಸುದೇಶ್ ರಾವ್, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಕಾಸರಗೋಡು ಜಿಲ್ಲಾಧ್ಯಕ್ಷ ಪ್ರದೀಪ್ ಬೇಕಲ್, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು ಅಧ್ಯಕ್ಷ ಶಿವರಾಮ ಕಾಸರಗೋಡು ಮುಂತಾದ ಅನೇಕ ಗಣ್ಯರು ಹೆಮ್ಮೆಯಿಂದ ಅಭಿನಂದನೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here