ಉಜಿರೆ : ಪರಮ ಪೂಜ್ಯ ಡಾಡಿ ವೀರೇಂದ್ರ ಹೆಗ್ಗಡೆಯವರು, ಮಾರ್ಗದರ್ಶನ ದಲ್ಲಿ ನಡೆಯುತ್ತಿರುವ ರುಡ್‌ಸೆಟ್ ಸಂಸ್ಥೆ ಉಜಿರೆಯಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ವೃತ್ತಿಪರ ಮೇಕಪ್ ಮಾಸ್ಟರ್‌ಕ್ಲಾಸ್, ಕಾರ್ಯಾಗಾರವು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಪದವೀಧರ ಸ್ವಾಯತ್ತ ಕಾಲೇಜು ಉಜಿರೆ, ಇದರ ಡೀನ್ ಡಾ ನೌಮ್ಯ. ಅವರು ಕಾರ್ಯಾಗಾರವನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದರು ಸಮಯ ಪಾಲನೆ ಶಿಸ್ತು ಮತ್ತು ಹೊಸತನದ ಮನೋಭಾವ ಸದಾ ಇರಲಿ ಎಂದು ಶಿಬಿರಾರ್ಥಿಗಳಿಗೆ ಅವರು ಆಶಯ ನುಡಿಗಳನ್ನು ಹೇಳಿದರು.
ಅಂತರಾಷ್ಟ್ರೀಯ ಪ್ರಮಾಣೀಕೃತ ಮೇಕಪ್ ಅರ್ಟಿಸ್ಟ್ ನೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಹಾಗೂ ಮೇಕಪ್ ಎಜುಕೇಟರ್ ಆಗಿರುವ ಹಾಸನದ ನೋಮು ಹಾಸನ್, ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ತಮ್ಮ ದೀರ್ಘ ವೃತ್ತಿ ಅನುಭವದ ಮಾತುಗಳನ್ನು ಶಿಬಿರಾರ್ಥಿಗಳೊಂದಿಗೆ ಹಂಚಿಕೊಂಡರು.

ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿಪಿ ವಿಜಯಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ತರಬೇತಿ ಪಡೆದ ನಂತರ ತಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ಬ್ಯಾಂಕ್ ಸಾಲದ ಸದುವಯೋಗ ಪಡಿಸಿಕೊಳ್ಳಿ ಎಂದು ಅವರು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು
ಅತಿಥಿ ಉಪನ್ಯಾಸಕರಾದ ಮಾಧವಿ ಎಂ ರೈ, ಹಾಗೂ ಆಶಾ ಸೋಮು ಹಾಸನ. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾನಕರಾದ ಅಬ್ರಹಾಂ ಜೇಮ್ಸ್, ಅವರು ಸ್ವಾಗತಿಸಿದರು. ಹಿರಿಯ ಉಪನ್ಯಾಸಕರಾದ ಶ್ರೀ ಕೆ ಕರುಣಾಕರ ಜೈನ್, ಅವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಲ್ಲಿಸಿದರು.
ಸಂಸ್ಥೆಯ ಸಹೋದ್ಯೋಗಿಗಳಾದ ರಶ್ಮಿ,, ಪ್ರವೀಣ್ ಕುಮಾರ್, ಕಾಶ್ಮೀರ ಡಿ ಸೋಜಾ, ಸುರೇಶ, ಸಹಕಾರಿಸಿದ್ದರು ಸಭೆಯಲ್ಲಿ , ಸೋಮು ಹಾಸನ್ ಅವರನ್ನು ಗೌರವಿಸಲಾಯಿತು ಕುಮಾರಿ .ಜಲಜಾಕ್ಷಿ ಮತ್ತು ಶ್ರಾವಣಿ, ತಂಡ ಪ್ರಾರ್ಥನಾ ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

