ಐವನ್ ಡಿ’ಸೋಜಾ ಶಿಫಾರಸ್ಸಿಗೆ ಸ್ಪಂದಿಸಿದ ಮುಖ್ಯಮಂತ್ರಿ ಪರಿಹಾರ ನಿಧಿ: 12 ಮಂದಿಗೆ ₹9.83 ಲಕ್ಷ ನೆರವು

0
17

ಮಂಗಳೂರು : ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದ 12 ಮಂದಿ ಅರ್ಜಿದಾರರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒಟ್ಟು ₹9,83,375/- ಪರಿಹಾರ ಧನ ಮಂಜೂರಾಗಿದ್ದು, ಈ ನೆರವು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ ಅವರ ಶಿಫಾರಸ್ಸಿನ ಮೇರೆಗೆ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಿಡುಗಡೆಯಾದ ಈ ನೆರವಿನಡಿ ಉಡುಪಿ ಜಿಲ್ಲೆಯ ಮರಿಯಾ ತೆರೆಸ ಡಿಸೋಜಾ ಅವರಿಗೆ ವಿಶೇಷ ಪ್ರಕರಣದಡಿ ₹3 ಲಕ್ಷ, ಕನ್ನನಗೌಡ ಹೇಮನಗೌಡ ಅವರಿಗೆ ₹2 ಲಕ್ಷ ಹಾಗೂ ಕೃಷ್ಣ ಮುರ್ಡೇಶ್ವರ ನಾಯ್ಕ ಅವರಿಗೆ ವಿಶೇಷ ಪ್ರಕರಣದಡಿ ₹2 ಲಕ್ಷ ನೆರವು ಮಂಜೂರಾಗಿದೆ.

ಇದಲ್ಲದೆ ಅಬ್ದುಲ್ ಖಾದರ್ (ಮಂಗಳೂರು) ₹59,066, ನೆಬಿಸ್ (ಸುಳ್ಯ) ₹79,747, ಪುಷ್ಪಲತಾ (ಕುದ್ರೋಳಿ) ₹31,893, ಅಬ್ದುಲ್ ಹಮೀದ್ (ಉಡುಪಿ) ₹25,000, ಪದ್ಮಾವತಿ (ಮೂಡಬಿದ್ರಿ) ₹24,217, ರೂಪಾ ರೈ (ಜಪ್ಪಿನಮೊಗರು) ₹23,500, ಹಮೀದ್ (ಮಂಗಳೂರು) ₹22,685, ಅಹಮ್ಮದ್ ಬಾವಾ (ಕಾಟಿಪಳ್ಳ) ₹8,737 ಹಾಗೂ ಮಹಮ್ಮದ್ ಅನ್ಸರ್ (ಮಂಗಳೂರು) ₹8,500 ಪರಿಹಾರ ಧನ ಪಡೆದಿದ್ದಾರೆ.

ಫಲಾನುಭವಿಗಳಿಗೆ ಮಂಜೂರಾದ ಪರಿಹಾರ ಧನ ಬಿಡುಗಡೆ ಪತ್ರಗಳನ್ನು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಐವನ್ ಡಿ’ಸೋಜಾ ಅವರು, ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ತಲುಪಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಇನ್ನಷ್ಟು ಅರ್ಹ ಫಲಾನುಭವಿಗಳಿಗೆ ನೆರವು ದೊರಕುವಂತೆ ಪ್ರಯತ್ನ ಮುಂದುವರಿಸುವುದಾಗಿ ತಿಳಿಸಿದರು.

LEAVE A REPLY

Please enter your comment!
Please enter your name here