ತೋಕೂರು : ಗಾಳಿ ಮಳೆ ಇರಲಿ ಇಲ್ಲದಿರಲಿ ತೋಕೂರು ಜನರಿಗೆ ಕರೆಂಟ್ ನದ್ದೇ ಸಮಸ್ಯೆ!

0
61

ಮೂಲ್ಕಿ : ಮೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಹಳೆಯಂಗಡಿ ಹತ್ತನೇ ತೋಕೂರಿನಲ್ಲಿ ಮಾತ್ರ ಪವರ್ ಸದಾಕಾಲ ಕಣ್ಣಾಮುಚ್ಚಾಲೆ ಆಡ್ತಾ ಇರುತ್ತೆ. ಮೆಸ್ಕಾಂಗೆ ಕರೆ ಮಾಡಿದ್ರೆ ಲೈನ್ ಫಾಲ್ಟ್, ಟಿಸಿ ಫೇಲ್, ಟ್ರಿಪ್ ಆಗಿದೆ ಬರ್ತದೆ, ಲೈನ್ ಗೆ ಗೆಲ್ಲು ಬಿದ್ದಿರ್ಬೇಕು ಇತ್ಯಾದಿ ರೆಡಿಮೇಡ್ ಉತ್ತರಗಳು.

ತೋಕೂರಿನಲ್ಲಿ ಮಳೆ ಜೋರಾಗಿ ಸುರಿಯುವಾಗ ರಾತ್ರಿಯಿಡೀ ಕರೆಂಟ್ ಇರುವುದಿಲ್ಲ ಬಿಡಿ, ಇನ್ನು ಬಿಸಿಲು ಇರುವಾಗಲೂ ಕರೆಂಟ್ ಇರದಿದ್ದರೆ ಮಾಡುವುದೇನು?
ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಗಮನ ಕೊಡದ ಕಾರಣ ಮೆಸ್ಕಾಂ ವಿಭಾಗದ ಮೇಲಧಿಕಾರಿಗಳ ಗಮನಕ್ಕೆ ತರಲು ಗ್ರಾಮಸ್ಥರು ಸಜ್ಜಾಗಿದ್ದಾರೆ.

ಗುರುವಾರ ಇಡೀ ದಿನ ಪವರ್ ಕಟ್, ರಾತ್ರಿ ಹತ್ತಾರು ಬಾರಿ ಸಕಾರಣವಿಲ್ಲದೆ ಪವರ್ ಕಟ್ ಮಾಡೋದ್ರಿಂದ ತೋಕೂರು ಗ್ರಾಮ ದ್ವೀಪದಂತೆ ಭಾಸವಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಕೈಗೊಳ್ಳಬೇಕಿದೆ.

LEAVE A REPLY

Please enter your comment!
Please enter your name here