ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

0
16

ಮೂಡುಬಿದಿರೆ : ಭಾರತೀಯ ಲೆಕ್ಕಪತ್ರ ಪರಿಶೋಧಕರ ಸಂಸ್ಥೆ (ICAI) ವತಿಯಿಂದ ಮೇ ತಿಂಗಳಲ್ಲಿ ನಡೆಸಲಾದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಮೂಡುಬಿದಿರೆಯ ನಿತೀಶ್ ಕಾಮತ್ ಅವರು ಯಶಸ್ವಿಯಾಗಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ಮೂಡುಬಿದಿರೆಯ ಮಿತ್ತಬೈಲಿನ ನಿತ್ಯಾನಂದ ಕಾಮತ್ ಹಾಗೂ ನಂದಿತಾ (ಪ್ರತಿಮಾ) ಕಾಮತ್ ದಂಪತಿಯ ಪುತ್ರರಾಗಿದ್ದಾರೆ. ಸಿ.ಎ. ಫೌಂಡೇಶನ್ ಹಂತದ ತರಬೇತಿಯನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಹಾಗೂ ಸಿ.ಎ. ಇಂಟರ್‌ಮೀಡಿಯೇಟ್ ಹಂತದ ತರಬೇತಿಯನ್ನು ಮಂಗಳೂರಿನ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಪೂರ್ಣಗೊಳಿಸಿದ್ದಾರೆ. ನಂತರ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ವಿಷ್ಣು ದಯಾ & ಕೋ. ಎಲ್‌ಎಲ್‌ಪಿ ಸಂಸ್ಥೆಯಲ್ಲಿ ಸಿ.ಎ. ಆರ್ಟಿಕಲ್‌ಶಿಪ್ ತರಬೇತಿಯನ್ನು ಪಡೆದು, ಇದೀಗ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

LEAVE A REPLY

Please enter your comment!
Please enter your name here