ರಾಷ್ಟ್ರೀಯ ಕಾವ್ಯೋತ್ಸವ -2026 ಕ್ಕೆ ಗಾಯಕ ಬರಹಗಾರ ಶರೀಫ್ ಪರ್ಲಿಯ ಆಯ್ಕೆ

0
15

ಪುತ್ತೂರು : ಕಪ್ಪತ್ತ ಗಿರಿ ಸಾಹಿತ್ಯ ಶಿಕ್ಷಣ ಹಾಗೂ ಸಾಂಸ್ಕೃತಿಕ ಕಲಾ ವೇದಿಕೆ ರಾಜ್ಯ ಘಟಕ ಕಳಸಾಪೂರ -ಗದಗ ಜಿಲ್ಲೆ ಇದರ ವತಿಯಿಂದ ದಿನಾಂಕ : 21.06.2026 ರಂದು ನಡೆಯುವ ವಿಶ್ವ ಪರಿಸರ ದಿನಾಚರಣೆ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ನಡೆಯುವ ರಾಷ್ಟ್ರ ಮಟ್ಟದ ಕಾವ್ಯೋತ್ಸವ -2026 ಕವಿ ಗೋಷ್ಠಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶರೀಫ್ ಪರ್ಲಿಯ ಇವರು ಆಯ್ಕೆಯಾಗಿರುತ್ತಾರೆ ಎಂದು ಕಪ್ಪತ್ತಗಿರಿ ಸಾಹಿತ್ಯ ಶಿಕ್ಷಣ ಹಾಗೂ ಸಾಂಸ್ಕೃತಿಕ ಕಲಾ ವೇದಿಕೆ ಅಧ್ಯಕ್ಷರಾಗಿರುವ ಚಂದ್ರಕಲಾ ಮ ಇಟಗಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೃತ್ತಿಯಲ್ಲಿ “ಗ್ಲಾಡ್ ಆಡಿಯೋ ರೆಕಾರ್ಡಿಂಗ್ ಸ್ಟುಡಿಯೋ” ಮಂಚಿಕಟ್ಟೆ ಇಲ್ಲಿ ಸೌಂಡ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿತ್ತಿರುವ ಇವರು ಕಳೆದ 12 ವರುಷಗಳಿಂದ ಬಹು ಭಾಷಾ ಗಾಯಕರಾಗಿದ್ದು ಹಲವಾರು ಆಲ್ಬಮ್ ಹಾಡುಗಳಿಗೆ ಧ್ವನಿಯಾಗಿದ್ದಾರೆ ಅದರೊಂದಿಗೆ ಬ್ಯಾರಿ ಹಾಗೂ ,ಕನ್ನಡ ಭಾಷೆಯಲ್ಲಿ ಕವನ ,ಲೇಖನ ,ಚುಟುಕು,
ಬರಹಗಾರರಾಗಿರುತ್ತಾರೆ ಹಾಗೆಯೇ ಕನ್ನಡ ಭಾಷೆಯಲ್ಲಿ ತಾಲೂಕು ಹಾಗೂ ರಾಜ್ಯ ಮಟ್ಟದ ಹಲವಾರು ಕವಿಗೋಷ್ಟಿಯಲ್ಲೂ ಭಾಗವಹಿಸಿರುತ್ತಾರೆ ಪ್ರಸ್ತುತ ನಡೆಯಲಿರುವ ಕವಿಗೋಷ್ಠಿ ಅಧ್ಯಕ್ಷತೆಯನ್ನು ಸಾಹಿತಿ ಮತ್ತು ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾಗಿರುವ ಡಾ. ಪಂಚಯ್ಯ ರಾ ಹಿರೇಮಠ್ ವಹಿಸಲಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ ಕವಿಗಳು ಆಗಮಿಸಲಿದ್ದರೆ.

LEAVE A REPLY

Please enter your comment!
Please enter your name here