ಮಂಗಳೂರು : ಕರಾವಳಿ ರ‍್ಕಲ್ ನಿಂದ ಕಂಕನಾಡಿ ಪಂಪ್ವೆಲ್ ವರೆಗಿನ ರಸ್ತೆ ಕಾಮಗಾರಿ ಮುಗಿದಿದ್ದು, ಸದ್ರಿ ಕಾಮಗಾರಿಯು ನಿಗದಿತ ಅವಧಿಯಲ್ಲಿ ಮುಗಿದು ಉತ್ತಮ ಕಾಮಗಾರಿಯನ್ನು ನಡೆಸಿ ಅಲ್ಲಿ ಇರುವ ಬೇಕಾದ ಎಲ್ಲಾ ರಸ್ತೆ ನಿಯಮಗಳನ್ನು ಅಳವಡಿಸಿರುವುದರಿಂದ ಹಾಗೂ ಸದ್ರಿ ರಸ್ತೆ ಪ್ರದೇಶಕ್ಕೆ ಭೇಟಿ ಕೊಟ್ಟು ಕಾಮಗಾರಿಯನ್ನು ಪರಿಶೀಲಿಸಿದ ಪೋಲಿಸ್ ಅಧಿಕಾರಿಗಳು ನಗರಪಾಲಿಕೆ ಮತ್ತು PWಆ ಅಧಿಕಾರಿಗಳೊಂದಿಗೆ ಮೂರು ವಿಭಾಗದ ಅಧಿಕಾರಿಗಳು ಸದ್ರಿ ರಸ್ತೆಯನ್ನು ಸಂಪರ‍್ಣಗೊಂಡಿದೆ ಎಂದು ನೂತನವಾಗಿ ನರ‍್ಮಾಣಗೊಂಡ ರಸ್ತೆಯಲ್ಲಿ ಸಂಚರಿಸಲು ಅನುಮತಿಸಲಾಗಿದೆ ಎಂದು ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರು ಇಂದು ತಿಳಿಸಿದ್ದಾರೆ.
ಒಂದು ಭಾಗದ ಕಾಮಗಾರಿಯು ಮುಕ್ತಾಯಗೊಂಡು, ಮುಂದಿನ ಕಾಮಗಾರಿಗಳು ಕೂಡಲೇ ಮುಕ್ತಾಯಗೊಳ್ಳಲಿರುವುದರಿಂದ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಮಳೆಗಾಲದಲ್ಲಿ ಜನರಿಗೆ ಸಹಕಾರಿಯಾಗುತ್ತದೆ ಎಂದು ಐವನ್ ಡಿʼಸೋಜಾ ತಿಳಿಸಿದ್ದಾರೆ. ಇನ್ನೊಂದು ಬದಿಯ ರಸ್ತೆಯ ಕಾಮಗಾರಿಯನ್ನು ಕೂಡಲೇ ಮುಗಿಸಿಕೊಟ್ಟು ಸರ‍್ವಜನಿಕ ಉಪಯೋಗಕ್ಕೆ ನೀಡಬೇಕೆಂದು ಸದ್ರಿ ರಸ್ತೆಗೆ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಸಂದರ‍್ಭದಲ್ಲಿ ಸ್ಥಳೀಯ ಜನರ ಬೇಡಿಕೆಯಂತೆ ಬಸ್ಸು ನಿಲ್ದಾಣವನ್ನು ನರ‍್ಮಿಸಿಕೊಡಬೇಕೆಂದು ಶಾಸಕರನ್ನು ಅಗ್ರಹಿಸಿದ್ದಾರೆ. ಸಂಚಾರಿ ಪೋಲಿಸರು ಈ ಬಗ್ಗೆ ಸೂಕ್ತ ಮರ‍್ಗರ‍್ಶನ ನೀಡಬೇಕೆಂದು ಸ್ಥಳದಲ್ಲಿದ್ದ ಪೋಲಿಸ್ ಅಧಿಕಾರಿಗೆ ಸೂಚನೆ ನೀಡಿದರು. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ, ನಿಲ್ದಾಣ ಒಂದನ್ನು ರಚಿಸಿ, ಪ್ರಯಾಣಿಕರಿಗೆ ಉಪಯೋಗವಾಗುವಂತೆ ಕೂಡಲೇ ಸೂಕ್ತವಾದ ಸ್ಥಳವನ್ನು ಗುರುತಿಸಿಕೊಡಬೇಕೆಂದು ಐವನ್ ಡಿʼಸೋಜಾರವರು ಸೂಚಿಸಿದ್ದಾರೆ.

