ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ

0
5

ಸದಸ್ಯರಿಗೆ ಶೇ.12ರಷ್ಟು ಡಿವಿಡೆಂಡ್ ಘೋಷಣೆ

ಉಡುಪಿ: ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಉಡುಪಿ ಇದರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸೆ.22ರಂದು ಅಜ್ಜರಕಾಡಿನ ಪುರಭವನದ ಮಿನಿಹಾಲ್‌ನಲ್ಲಿ ಸಂಘದ ಅಧ್ಯಕ್ಷ ಕೆ. ರಘುಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ನಿರ್ದೇಶಕ ಶಿವಪ್ರಸಾದ್ ಶೆಟ್ಟಿ ಅವರು ಸ್ವಾಗತಿಸಿದರು. ಅಧ್ಯಕ್ಷ ಕೆ. ರಘುಪತಿ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಕಾರ್ಯಚಟುವಟಿಕೆಗಳು ಹಾಗೂ ಸದಸ್ಯರ ಸಹಕಾರದ ಕುರಿತು ಮಾಹಿತಿ ಹಂಚಿಕೊಂಡರು.

ಸಭೆಯಲ್ಲಿ ಸಂಘದ 2025–26ನೇ ಸಾಲಿನ ಆಡಳಿತ ವರದಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಿತು. ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಶೇ.12ರಷ್ಟು ಡಿವಿಡೆಂಡ್ ಘೋಷಿಸಲಾಯಿತು.

ಸಂಘದ ಉಪಾಧ್ಯಕ್ಷ ರಮೇಶ್ ಶೆಟ್ಟಿ ಕಾರ್ಕಳ, ನಿರ್ದೇಶಕರಾದ ಸುರೇಶ್ ಪ್ರಭು, ರಮೇಶ್ ಶೆಟ್ಟಿ ಜಾರ್ಕಳ, ಸ್ನೇಹಪ್ರಭಾ ಕಮಲಾಕ್ಷ, ಶಿವಪ್ರಸಾದ್ ಶೆಟ್ಟಿ, ಗಣೇಶ್ ಕುಮಾರ್, ರಾಧಿಕಾ ಕಾಮತ್, ಅವಿನಾಶ್ ಬಿ.ಎಸ್. ಹಾಗೂ ಸಂಘದ ಸಲಹೆಗಾರ ಪ್ರೊ. ಕೆ. ಕಮಲಾಕ್ಷ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಂಜಿತಾ ಪ್ರವೀಣ್ ಅವರು 2025–26ನೇ ಸಾಲಿನ ಆಡಳಿತ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ವರದಿಯ ಕುರಿತು ಸದಸ್ಯರೊಂದಿಗೆ ಚರ್ಚೆ ನಡೆಯಿತು.

ಸಭೆಯ ಕೊನೆಯಲ್ಲಿ ಸಂಘದ ಬ್ರಹ್ಮಾವರ ಶಾಖಾ ವ್ಯವಸ್ಥಾಪಕ ರಂಜಿತ್ ಉಳಿತ್ತಾಯ ಅವರು ಧನ್ಯವಾದ ಸಲ್ಲಿಸಿದರು. ಬಳಿಕ ಸಭೆ ಮುಕ್ತಾಯಗೊಂಡಿತು.