ನಾಯಕತ್ವದ ಗುಣ ಬೆಳೆಸುವ ಮಾಧ್ಯಮ ಶಾಲಾ ಸಂಸತ್ತು : ಉದಯ ಅಮೀನ್
ಮುಲ್ಕಿ : ವಿದ್ಯಾರ್ಥಿ ದಿಸೆಯಲ್ಲಿಯೇ ನಾಯಕತ್ವದ ಗುಣ ಬೆಳೆಸುವ ಮಾಧ್ಯಮವೇ ಶಾಲಾ ಸಂಸತ್ತು. ಅದರ ಮೂಲಕ ನಾಯಕತ್ವದ ಗುಣ ಬೆಳೆಸಿ. ಜೀವನ ರೂಪಿಸಿದ ಹೆತ್ತವರು, ಶಾಲೆ, ಗುರುಗಳನ್ನು ಜೀವನದಲ್ಲಿ ಮರೆಯದೆ ಸದಾ ನೆನಪಿಸುವ ಕಾರ್ಯ ಮಾಡುವ ಎಂದು ಮುಲ್ಕಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ಲ.ಉದಯ ಆಮೀನ್ ಹೇಳಿದರು.
ಅವರು ಸಿಯಸ್ಐ ಶಾಲೆ ಕಾರ್ನಾಡ್ ಇಲ್ಲಿ ಜರಗಿದ ಶಾಲಾ ಸಂಸತ್ ಹಾಗೂ ತರಗತಿ ಪ್ರತಿನಿಧಿಗಳ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ.ಹರ್ಷರಾಜ್ ಶೆಟ್ಟಿ ಜಿ.ಎಮ್. ಮಾತನಾಡಿ, ಎಳವೆಯಲ್ಲಿಯೇ ನಾಯಕತ್ವದ ಗುಣ ಬೆಳೆಸುವ ಅನಿವಾರ್ಯತೆಯಿದೆ. ಪ್ರತಿಯೊಬ್ಬರೂ ಶಾಲಾ ನಿಯಮಗಳಿಗೆ ಬದ್ಧರಾದಾಗ ಮಾತ್ರ ಶಿಸ್ತು ಮೂಡಬಹುದು ಎಂದರು.
ಈ ಸಂದರ್ಭ ವಿಜಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಸ್ಯಾಮ್ ಮಾಬೆನ್, ಶಾಲಾ ಸಂಚಾಲಕ ರಂಜನ್ ಜತ್ತನ್ನ ಮಾತನಾಡಿದರು.
ಶಾಲಾ ನೂತನ ನಾಯಕಿ ಭೂಮಿಕಾ, ಉಪ ನಾಯಕರಾದ ಅಬುಬಕರ್, ಅಮ್ನಾ ಮರಿಯಮ್ ತಮ್ಮ ಮುಂದಿನ ಕಾರ್ಯಯೋಜನೆಗಳನ್ನು ಪ್ರಸ್ತುತಪಡಿಸಿದರು.
ಸ್ಥಳೀಯ ಸಭಾ ಪಾಲನಾ ಸಮಿತಿ ಅಧ್ಯಕ್ಷರಾದ ರೆ.ವಿಲಿಯಂ ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಶಾಲಾ ನೂತನ ನಾಯಕಿ ಭೂಮಿಕಾ, ಉಪ ನಾಯಕರಾದ ಅಬುಬಕರ್, ಅಮ್ನಾ ಮರಿಯಮ್, ಮುಖ್ಯ ಶಿಕ್ಷಕಿ ಶಾಂತಿ ಸುಹಾಸಿನಿ ಕರ್ಕಡ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಶಾಂತಿ ಸುಹಾಸಿನಿ ಕರ್ಕಡ ಸ್ವಾಗತಿಸಿದರು. ಝೀಠ ಮೆಂಡೋನ್ಸ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರತೀಕ್ಷ ಮತ್ತು ರೇಶ್ಮಾ ನಿರೂಪಿಸಿ, ಎಲಿಜಬೆತ್ ಪುಷ್ಪಲತಾ ವಂದಿಸಿದರು.

