ಮಂಗಳೂರಿನ ಪುರಭವನದಲ್ಲಿ SIR ಜನಜಾಗೃತಿ ಸಮಾವೇಶದಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿʼಸೋಜಾರವರ ಮಾದರಿ ಹೆಜ್ಜೆ

0
6

ಮಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಏPಅಅ) ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂ‌ದರ‍್ಭದಲ್ಲಿ, ಅಧ್ಯಕ್ಷರಾದB. K. Hariprasad ಅವರು ಕಾರ್ಯಕರ್ತರಿಗೆ ಶಾಲು, ಹೂಹಾರ ಹಾಗೂ ಬುಕ್ಕೆಗಳನ್ನು ನೀಡುವುದಕ್ಕಿಂತ ಅದರ ವೆಚ್ಚವನ್ನು ಪಕ್ಷದ ಕಾರ‍್ಯಕ್ರಮಗಳಿಗೆ ದೇಣಿಗೆಯಾಗಿ ನೀಡುವಂತೆ ಕರೆ ನೀಡಿದ್ದರು.

ಅವರ ಈ ಕರೆಗೆ ಸ್ಪಂದಿಸಿ, ಮಂಗಳೂರಿನಲ್ಲಿ ನಡೆದ ವಿಭಾಗ ಮಟ್ಟದ RSI ಜನಜಾಗೃತಿ ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದIvan D’Souza ಅವರು ಮಾದರಿಯ ಹೆಜ್ಜೆಯಿಟ್ಟರು. ಕಾರ‍್ಯಕ್ರಮದ ಅಂಗವಾಗಿ ತಾವು ಅಳವಡಿಸಲು ಉದ್ದೇಶಿಸಿದ್ದ ಸುಮಾರು ₹20,000 ಮೌಲ್ಯದ ಬ್ಯಾನರ್‌ಗಳನ್ನು ಹಾಕದೇ, ಅದೇ ಮೊತ್ತದ ₹20,000/- ಚೆಕ್ ಅನ್ನು ಕೆಪಿಸಿಸಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ಈ ಮೂಲಕ ಪಕ್ಷದ ಅಧ್ಯಕ್ಷರ ಕರೆಯನ್ನು ಕರ‍್ಯರೂಪಕ್ಕೆ ತಂದು, ಇತರ ಕಾರ್ಯಕರ್ತರಿಗೂ ಮಾದರಿಯಾದರು. ರಾಜ್ಯಾದ್ಯಂತ ಇಂತಹ ಸಕಾರಾತ್ಮಕ ಹಾಗೂ ಪಕ್ಷ ಸಂಘಟನೆಯನ್ನು ಬಲಪಡಿಸುವ ಕರ‍್ಯಕ್ರಮಗಳು ಇನ್ನಷ್ಟು ನಡೆಯಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರಾದB. K. Hariprasad ಅವರಿಗೆ ಕೆಪಿಸಿಸಿ ಉಪಾಧ್ಯಕ್ಷರಾದ Ivan D’Souza ಅವರು ₹20,000/- ಮೊತ್ತದ ಚೆಕ್ ಹಸ್ತಾಂತರಿಸಿದರು. ಪಕ್ಷದ ಅಧ್ಯಕ್ಷರ ಕರೆಗೆ ಸ್ಪಂದಿಸಿದ ಮೊದಲ ಸಾಲಿನ ನಾಯಕರಲ್ಲಿ ಒಬ್ಬರಾಗಿ ಅವರು ಗುರುತಿಸಿಕೊಂಡರು.

LEAVE A REPLY

Please enter your comment!
Please enter your name here