ಬ್ರಹ್ಮಾವರ : ಎನ್ಎನ್ಓ ಬ್ರಹ್ಮಾವರ ಘಟಕ ವತಿಯಿಂದ ಆತ್ರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಲೇಖನ ಸಾಮಾಗ್ರಿ ಹಾಗೂ ಸಿಹಿತಿಂಡಿ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸಬೀನಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಮ್ಮ ನಾಡ ಒಕ್ಕೂಟ ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ಶಕೀರ್ ಹಾವಂಜೆ, ಜಿಲ್ಲಾ ಸಮಿತಿ ಸದಸ್ಯ ಹಾರೂರ್ ರಶೀದ್,ತಾಲೂಕು ಪ್ರದಾನ ಕಾರ್ಯದರ್ಶಿ ಸಲೀಂ ಶೇಖ್ ಮತ್ತು ಸುಹಾನ್ ಸಾಸ್ತಾನ ಹಾಜರಿದ್ದರು. ಇದೇ ಸಂದರ್ಭದಲ್ಲಿ ಶಾಲೆಗೆ ಪೈಂಟಿಂಗ್ ರೂ. ಹತ್ತು ಸಾವಿರ ರೂಪಾಯಿ ಹಾಗೂ ವಿದ್ಯಾರ್ಥಿಗಳ ಐಡಿ ಕಾರ್ಡ್ ಗೆ ಸಲೀಂ ಶೇಖ್ ರವರು ಐಡಿ ಕಾರ್ಡ್ ಬಾಬ್ತು ರೂಪಾಯಿ ಐದು ಸಾವಿರ ನೀಡಿ ಸಹಕರಿಸಿದರು.

ಪುಸ್ತಕ ಹಾಗೂ ಲೇಖನ ಸಾಮಗ್ರಿಗಳ ಒಟ್ಟು ಖರ್ಚು ರೂಪಾಯಿ ಇಪ್ಪತೆರಡು ಸಾವಿರ ರೂಪಾಯಿ ಮೌಲ್ಯದ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಿಸಲಾಯಿತು.ವಕೀಲರಾದ ಮೊಹಮ್ಮದ್ ಸುಹಾನ್ ಸಾಸ್ತಾನ ,ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಪೆನ್ನು ಪೆನ್ಸೀಲ್ ರಬ್ಬರ್ ಇತ್ಯಾದಿಗಳನ್ನು ನೀಡಿದರು. ಸಿಹಿತಿಂಡಿ ವಿತರಿಸಲಾಯಿತು. ಮಾಜಿ ಗ್ರಾಮ ಪಂಚಾಯತ್ ಸದಸ್ಯ ಇಸ್ಮಾಯಿಲ್ ರವರು ನೀಡಿದ ಫೈಲ್ ಗಳನ್ನು ವಿತರಿಸಿದರು. ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಕೀರ್ತಿ ನಾಯಕ್, ಹಳೆ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷರಾದ ಉದಯ ಹೆಗ್ಡೆ ಶಾಲಾ ಹಿತ ಚಿಂತಕ ಹರೀಶ್ ಹೆಗ್ಡೆ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತ್ಯಾನಂದ ನಾಯಕ್, ಮಾಜಿ ಎಸ್ಡಿಎಂಸಿ ಅಧ್ಯಕ್ಷ ಶ್ರೀ ಅಬ್ದುಲ್ ರಹಿಮಾನ್ ಮುಂತಾದವರು ವೇದಿಕೆಯಲ್ಲಿ ಆಸಿನರಾಗಿದ್ದರು
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಜ್ಯೋತಿ, ಸುಹಾಸಿನಿ, ವಿಮಲಾ, ಶಾರದಾ ಮುಂತಾದವರು ಉಸ್ಥಿತರಿದ್ದರು.ಈ ಸಮಯದಲ್ಲಿ ಪಂಚಾಯತ್ ಪ್ರತಿನಿಧಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಶಿಕ್ಷಕ ರಕ್ಷಕ ಸಮೀತಿ ಅಧ್ಯಕ್ಷರು, ಶೀಕ್ಷರು ಹಾಗೂ ವಿದ್ಯಾರ್ಥಿಗಳು ಉಪಸ್ಥಿರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಸರಸ್ವತಿ ಯವರು ಸರ್ವರನ್ನು ಸ್ವಾಗತಿಸಿದರು. ಶಿಕ್ಷಕಿ ಶಬನಾ ಪರ್ವೀನ್ ವಂದಿಸಿದರು.

