ಎನ್ಎನ್ಓ ಹೆಬ್ರಿ : ಉಚಿತ ನೋಟ್ ಪುಸ್ತಕ ಬ್ಯಾಗ್ ವಿತರಣೆ ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದ ವತಿಯಿಂದ ಬೆಳ್ವೆ ಜಮಾತ್ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ , ಸ್ಕೂಲ್ ಬ್ಯಾಗ್, ಲೇಖನ ಸಾಮಗ್ರಿಗಳನ್ನು ಇತ್ತೀಚೆಗೆ ಬೆಳ್ವೆ ಹಿದಾಯತುಲ್ ಉಲೂಮ್ ಮದ್ರಸ ವಠಾರದಲ್ಲಿ ವಿತರಿಸಲಾಯಿತು.

ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದ ಅಧ್ಯಕ್ಷರಾದ ಅನ್ಸಾರ್ ಹೊಸಂಗಡಿ ಅಧ್ಯಕ್ಷತೆ ವಹಿಸಿದ್ದರು, ಅತಿಥಿಗಳಾಗಿ ಜುಮ್ಮಾ ಮಸೀದಿ ಬೆಳ್ವೆಯ ಖತೀಬ್ ಮೌಲಾನಾ ಮೊಹಮ್ಮದ್ ರಫೀಕ್ ಬೆಳ್ವೆ ,ಜುಮ್ಮಾ ಮಸೀದಿ ಬೆಳ್ವೆ ಅಧ್ಯಕ್ಷ ಅಹಮದ್ ಬ್ಯಾರಿ , ಕೃಷಿಕ ಬಿ.ಕೆ ಶಬ್ಬೀರ್ ಸಾಹೇಬ್ ಬೆಳ್ವೆ , ಸ್ಥಳೀಯರಾದ ಅಬ್ದುಲ್ ಶುಕುರ್ ಜಿಫ್ರಿ ಸಾಹೇಬ್, ಉಪಸ್ಥಿರಿದ್ದರು. ಎನ್ ಎನ್ ಓ ಹೆಬ್ರಿ ಸದಸ್ಯ ಜಾಸಿಂ ಸ್ವಾಗತಿಸಿದರು , ಮೊಹಮ್ಮದ್ ರಬಿ ಪ್ರಾರ್ಥಿಸಿದರು.
ನಮ್ಮ ನಾಡ ಒಕ್ಕೂಟ ಹೆಬ್ರಿಯ ಯುವ ಸಂಘಟಕ ಅಸಿಫ್ ಅಲ್ಬಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

