ಮಣಿಪಾಲ : ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ 90.4 ಮೆಗಾಹರ್ಟ್ಝ್ ಸಮುದಾಯ ಬಾನುಲಿ ಕೇಂದ್ರವು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ದ ಸಹಕಾರದಲ್ಲಿ ಅರ್ಪಿಸುತ್ತಿರುವ ಕಥೆ ಕೇಳೋಣ ಸರಣಿ ಕಾರ್ಯಕ್ರಮದ 217ನೇ ಸಂಚಿಕೆ ಜೂನ್ ತಿಂಗಳ ದಿನಾಂಕ * 27 ರಂದು ಶನಿವಾರ ಸಂಜೆ 4.30ಕ್ಕೆ ಪ್ರಸಾರವಾಗಲಿದೆ.
ಈ ಸಂಚಿಕೆಯಲ್ಲಿ ವಿದ್ಯಾರ್ಥಿನಿ ಅನುಷಾ ಸಿ.ಹೆಚ್ ಅವರಿಂದ ಸ್ವರಚಿತ ಕಥೆಯನ್ನು ಕೇಳುವಿರಿ. ಜೂನ್ 28 ರಂದು ಮಧ್ಯಾಹ್ನ 12.30ಕ್ಕೆ ಇದರ ಮರುಪ್ರಸಾರವಿರುವುದು. ರೇಡಿಯೊದಲ್ಲಿ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ
https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ಈ ಕಾರ್ಯಕ್ರಮವನ್ನು ಕೇಳಬಹುದಾಗಿದೆ ಎಂದು ರೇಡಿಯೊ ಮಣಿಪಾಲ್ ನ ಪ್ರಕಟಣೆ ತಿಳಿಸಿದೆ.

