ಮಹಾತ್ಮ ಜ್ಯೋತಿಬಾ ಫುಲೆ ಪ್ರಶಸ್ತಿಗೆ ಕವಿಗಳು, ಕಲಾವಿದರಿಂದ ಅರ್ಜಿ ಆಹ್ವಾನ

0
4

ಉಡುಪಿ : ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರುದಲ್ಲಿರುವ ಬಿಸಿ ಸಂಕ್ಷೇಮ ಸೇವಾ ಸಂಘ ವತಿಯಿಂದ ಮಹಾತ್ಮ ಜ್ಯೋತಿಬಾ ಫುಲೆ ಪ್ರಶಸ್ತಿಗಾಗಿ ಕವಿಗಳು, ಕಲಾವಿದರು ಹಾಗೂ ಕಲಾ ಪೋಷಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಜುಲೈ 12, 2026ರಂದು (ಭಾನುವಾರ) ಪಲಮನೇರು ಲಯನ್ಸ್ ಕ್ಲಬ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಒಟ್ಟು 60 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದರಲ್ಲಿ ಆಂಧ್ರಪ್ರದೇಶದಿಂದ 20, ತೆಲಂಗಾಣದಿಂದ 10, ತಮಿಳುನಾಡಿನಿಂದ 10, ಕರ್ನಾಟಕದಿಂದ 10 ಹಾಗೂ ಕೇರಳದಿಂದ 10 ಮಂದಿ ಆಯ್ಕೆಯಾಗಲಿದ್ದಾರೆ.

ಆಯ್ಕೆಯಾದ ಸಾಧಕರಿಗೆ ವೇದಮಂತ್ರಗಳೊಂದಿಗೆ ಪೂಜೆ, ಚಂದನ, ಗಂಗಾಜಲ, ಪ್ರಶಸ್ತಿ ಪ್ರಮಾಣಪತ್ರ, ಶಾಲು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು.

ಆಸಕ್ತ ಕವಿಗಳು, ಕಲಾವಿದರು ಮತ್ತು ಕಲಾ ಪೋಷಕರು ತಮ್ಮ ಹೆಸರು, ಕ್ಷೇತ್ರ, ವೃತ್ತಿ, ಅಂಕಿತನಾಮ, ಮೊಬೈಲ್ ಸಂಖ್ಯೆ, ಇದುವರೆಗೆ ಪಡೆದ ಪ್ರಶಸ್ತಿಗಳ ವಿವರ ಹಾಗೂ ಒಂದು ಕವನದ ತೆಲುಗು ಅನುವಾದ ಸೇರಿದಂತೆ ಅಗತ್ಯ ಮಾಹಿತಿಯನ್ನು 7893282847 ಸಂಖ್ಯೆಗೆ ಕಳುಹಿಸಿ ನೋಂದಾಯಿಸಿಕೊಳ್ಳಬಹುದು.

ನೋಂದಣಿ ಶುಲ್ಕ: ₹350.

ಹೆಚ್ಚಿನ ಮಾಹಿತಿಗಾಗಿ 7893282847 ಸಂಖ್ಯೆಯನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here