ಮೂಡುಬಿದಿರೆ : ಜವನೆರ್ ಬೆದ್ರ ಫೌಂಡೇಶನ್(ರಿ.) ಹಾಗೂ ಉಪಘಟಕಗಳ ವತಿಯಿಂದ ನಡೆದ ಬೃಹತ್ ರಕ್ತದಾನ ಹಾಗೂ ಸಸಿ ವಿತರಣಾ ಕಾರ್ಯಕ್ರಮ ಬೆದ್ರದ ಸಮಾಜ ಮಂದಿರದಲ್ಲಿ ಯಶಸ್ವಿಯಾಗಿ ಜರುಗಿತು. ಪ್ರಾದೇಶಿಕ ರಕ್ತಪೂರಣ ಕೇಂದ್ರ ಹಾಗೂ ಸರ್ಕಾರಿ ಜಿಲ್ಲಾಸ್ಪತ್ರೆ ವೆನ್ಲಾಕ್ ಇದರ ಸಹಯೋಗದಲ್ಲಿ ಜೂನ್ 27ರಂದು ನಡೆದ ಈ ಮಹಾರಕ್ತದಾನ ಶಿಬಿರದಲ್ಲಿ 100ಕ್ಕೂ ಅಧಿಕ ದಾನಿಗಳು ರಕ್ತದಾನ ಮಾಡಿದರು.
ಜವನೆರ್ ಬೆದ್ರ ಫೌಂಡೇಶನ್(ರಿ.) ಮೂಡುಬಿದಿರೆ ಇದರ ಸಂಸ್ಥಾಪಕರಾದ ಅಮರ್ ಕೋಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಧಿಗಳಾಗಿ ಭಾಗವಸಿದ್ದ ಮೂಡುಬಿದಿರೆ ಶಾಸಕ ಉಮನಾಥ್ ಕೋಟ್ಯಾನ್, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ವಿಥುನ್ ರೈ, ಮಾಜಿ ಸಚಿವ ಹಾಗೂ ಸಮಾಜಮಂದಿರ ಸಭಾ ಅಧ್ಯಕ್ಷ ಕೆ.ಆಭಯ ಚಂದ್ರ ಜೈನ್, ನಿಕಟಪೂರ್ವ ಬಿಜೆಪಿ ಜೆಲ್ಲಾಧ್ಯಕ್ಷ ಸುದರ್ಶನ್ ಎಂ, ವಕೀಲರ ಸಂಘದ ಅಧ್ಯಕ್ಷ ಶರತ್ ಶೆಟ್ಟಿ, ಇನ್ನರ್ ವೀಲ್ ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ನ್ಯಾಯವಾದಿ ಶ್ವೇತಾ ಜೈನ್, ಮೂಡುಬಿದಿರೆ ಪುರಸಭೆ ನಿಕಟಪೂರ್ವ ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸಮಾಜ ಮಂದಿರ ಸಭಾ ಕಾರ್ಯದರ್ಶಿ ಸುರೇಶ್ ಪ್ರಭು, ರೋಟರಿ ಕ್ಲಬ್ ಅಫ್ ಮೂಡುಬಿದಿರೆ ಟೆಂಪಲ್ ಟೌನ್ ಅಧ್ಯಕ್ಷ ಗಿರೀಶ್ ಕೋಟ್ಯಾನ್, ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಹಾಗೂ ಇನ್ನಿತರರು ಜವನೆರ್ ಬೆದ್ರ ಫೌಂಡೇಶನ್’ನ ಸೇವಾಪರತೆಯನ್ನು ಕೊಂಡಾಡಿದರು.
ಮುಖ್ಯ ಅತಿಥಿಗಳು ಹಾಗೂ ರಕ್ತದಾನಿಗಳ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮವ ಯಶಸ್ವಿಯಾಗಿ ಜರುಗಿತು. ಸಂಘಟನೆಯ ಸಂಸ್ಥಾಪಕರಾದ ಅಮರ್ ಕೋಟೆ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು, ಸಂದೀಪ್ ದರೆಗುಡ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಅಕ್ಷಯ್ ಕುಮಾರ್ ವಂದಿಸಿದರು. 118 ರಕ್ತಧಾನಿಗಳು ರಕ್ತದಾನ ಮಾಡಿದರು.

