ಬಂಟ್ವಾಳ : ಶ್ರೀ ರುದ್ರ ಪಾರಾಯಣ ಸಮಿತಿ ಬಂಟ್ವಾಳದ ವತಿಯಿಂದ ಅದ್ಯಪಾಡಿಯ ನೀಲಕಂಠ ಶ್ರೀ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಭಕ್ತಿಭಾವದಿಂದ ಸಾಮೂಹಿಕ ಶ್ರೀ ರುದ್ರ ನಮಕ–ಚಮಕ ಪಾರಾಯಣ ಹಾಗೂ ವಿವಿಧ ವೇದಸೂಕ್ತಗಳ ಪಠಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ರುದ್ರ ನಮಕ–ಚಮಕ, ಗಣಪತಿ ಸೂಕ್ತ, ಸೌರ ಸೂಕ್ತ, ದೇವಿ ಸೂಕ್ತ, ಆಘಮರ್ಷಣ ಸೂಕ್ತ ಹಾಗೂ ಇತರ ವೇದಸೂಕ್ತಗಳ ಪಾರಾಯಣವನ್ನು ಸಾಮೂಹಿಕವಾಗಿ ನಡೆಸಲಾಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮದ ಪುಣ್ಯಫಲವನ್ನು ಪಡೆದರು.
ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ದೇವಸ್ಥಾನದ ಅರ್ಚಕರಾದ ಕೃಷ್ಣ ಭಟ್ ಹಾಗೂ ನರಸಿಂಹ ಭಟ್, ನಿವೃತ್ತ ಪಿಡಬ್ಲ್ಯೂಡಿ ಎಂಜಿನಿಯರ್ ಶ್ರೀನಿವಾಸ ಹೊಳ್ಳ, ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸೀತಾರಾಮ ಮೈಯ್ಯ, ಉಜಿರೆಯ ಎಸ್‌ಡಿಎಂ ಕಾಲೇಜಿನ ಉಪನ್ಯಾಸಕ ರವಿಶಂಕರ ಕಾರಂತ, ಎಂ. ಶಾಂತರಾಮ ರಾವ್, ಎನ್. ರಾಮಚಂದ್ರ ಮೈಯ್ಯ, ಎಂ. ಜಯರಾಮ ಮೈಯ್ಯ, ಚಂದ್ರಮೋಹನ ರಾವ್, ಮಿಥುನ್ ರಾವ್, ಅರ್ಬಿ ಕೃಷ್ಣ ಸೋಮಯಾಜಿ, ಕೆ. ರಾಜಾರಾಮ ಐತಾಳ, ಲಕ್ಷ್ಮೀಶ ಭಟ್ ಹಾಗೂ ಮಂಜುನಾಥ ಭಂಡಾರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಭಕ್ತರ ಭಕ್ತಿ, ಶ್ರದ್ಧೆ ಮತ್ತು ವೇದಘೋಷಗಳಿಂದ ಕಂಗೊಳಿಸಿತು.

