ಬೆಂಗಳೂರು: ಗ್ರೇಟ್ ಪ್ಲೇಸ್ ಟು ವರ್ಕ್® ಪ್ರಮಾಣೀಕೃತ ಸಂಸ್ಥೆಯಾಗಿರುವ ಯುನಿಮೋನಿ (Unimoni) ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಸಂಸ್ಥೆಯಲ್ಲಿ ಗೋಲ್ಡ್ ಲೋನ್ ಅಧಿಕಾರಿ (Gold Loan Officer), ಫಾರೆಕ್ಸ್ ಅಧಿಕಾರಿ (Forex Officer) ಹಾಗೂ ಟ್ರಾವೆಲ್ ಕನ್ಸಲ್ಟೆಂಟ್ (Travel Consultant) ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಬೆಂಗಳೂರು ನಗರದ ಇಂದಿರಾನಗರ, ಮಾರತ್‌ಹಳ್ಳಿ, ಮಣಿಪಾಲ್ ಸೆಂಟರ್, ಕೋರಮಂಗಲ, ಜಯನಗರ ಹಾಗೂ ಆರ್.ಟಿ. ನಗರ ಶಾಖೆಗಳಲ್ಲಿ ಉದ್ಯೋಗಾವಕಾಶಗಳಿದ್ದು, ತುಮಕೂರು ಮತ್ತು ಮೈಸೂರು ನಗರಗಳಲ್ಲಿಯೂ ನೇಮಕಾತಿ ನಡೆಯಲಿದೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು bh.koramangala@unimoniindia.com ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 99642 45329 ಅಥವಾ 99455 69710 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಶೀಘ್ರವೇ ಅರ್ಜಿ ಸಲ್ಲಿಸುವಂತೆ ಸಂಸ್ಥೆ ತಿಳಿಸಿದೆ.

