ಮೂಡುಬಿದಿರೆ: ಮಳೆಗಾಲ ಆರಂಭವಾಗಿ ಹಲವು ದಿನಗಳು ಕಳೆದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಲೋಕಕಲ್ಯಾಣಕ್ಕಾಗಿ ಜುಲೈ 4ರಂದು ಮೂಡುಬಿದಿರೆಯ ಶ್ರೀ ವೀರಮಾರುತಿ ದೇವಸ್ಥಾನ, ಕೋಟೆಬಾಗಿಲುದಲ್ಲಿ ಸಾರ್ವಜನಿಕ ಸೀಯಾಳಾಭಿಷೇಕ ನಡೆಯಲಿದೆ.
ಪ್ರಕೃತಿಯ ಅನುಗ್ರಹದಿಂದ ಕಾಲಕ್ಕೆ ಸರಿಯಾಗಿ ಮಳೆಯಾಗಿ ಕೃಷಿಕರ ಬದುಕು ಹಸನಾಗಲಿ ಎಂಬ ಸಂಕಲ್ಪದೊಂದಿಗೆ ದೇವಸ್ಥಾನದ ಆಡಳಿತ ಮಂಡಳಿ ಈ ವಿಶೇಷ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿದೆ.
ಜುಲೈ 4, ಶನಿವಾರ ಬೆಳಿಗ್ಗೆ 9.00 ಗಂಟೆಗೆ ಸರ್ವಪ್ರಾಣ ಸ್ವರೂಪನಾದ ಶ್ರೀ ವೀರಮಾರುತಿ ಸನ್ನಿಧಿಯಲ್ಲಿ ಭಕ್ತಿಭಾವದಿಂದ ಸೀಯಾಳಾಭಿಷೇಕ ನೆರವೇರಲಿದೆ.
ಈ ಪುಣ್ಯ ಕಾರ್ಯದಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಶ್ರೀ ವೀರಮಾರುತಿ ದೇವಸ್ಥಾನ, ಕೋಟೆಬಾಗಿಲು ಆಡಳಿತ ಮೊಕ್ತೇಸರರು, ಕಾರ್ಯದರ್ಶಿ ಹಾಗೂ ಮೊಕ್ತೇಸರರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

