ಬೆಳ್ಮಣ್ಣು ವ್ಯವಸಾಯ ಸೇವಾ ಸಹಕಾರಿ ಸಂಘ : ಪ್ರೇಮ ಶೆಟ್ಟಿ ನಿವೃತ್ತಿ – ಸನ್ಮಾನ ಕಾರ್ಯಕ್ರಮ

0
30

ಬೆಳ್ಮಣ್ಣು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಳೆದ 39 ವರ್ಷಗಳಿಂದ ಸೇವೆ ಸಲ್ಲಿಸಿ ಪ್ರಸ್ತುತ ಪ್ರಮುಖ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರೇಮಾ ಶೆಟ್ಟಿ ಅವರು ನಿವೃತ್ತಿ ಹೊಂದಿದ್ದು ಅವರ ಸೇವಾ ಕಾರ್ಯವನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಗೌರವ ಸನ್ಮಾನ ನಡೆಸಿದರು.

ಈ ಸಂದರ್ಭದಲ್ಲಿ ಬೆಳ್ಮಣ್ಣು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ದೇವೇಂದ್ರ ನಾಯಕ್, ಉಪಾಧ್ಯಕ್ಷರಾದ ಸೆವ್ರಿನ್ ಡೇಸಾ, ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾದ ನಿತ್ಯಾನಂದ ಶೆಟ್ಟಿ, ಸಂಜೀವ ಶೆಟ್ಟಿ, ಜೆರಾಲ್ಡ್ ಡಿಸೋಜಾ, ಉದಯ ನಾಯ್ಕ್, ರಾಮಚಂದ್ರ ಸಾಲ್ಯಾನ್, ಸಂಘದ ಮ್ಯಾನೇಜರ್ ಸಂದೀಪ್ ನಾಯಕ್, ನಿವೃತ್ತ ಮ್ಯಾನೇಜರ್ ವಸಂತ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here