ಜೀವನದಲ್ಲಿ ಸಾಧನೆಯ ಗುರಿ ಅಂತರ್ಯಕೆ ಪ್ರೇರಕ ಶಕ್ತಿ, ಯಾವುದೇ ಸಾಧನೆಯ ಹಿಂದೆ ಕಠಿಣ ಪರಿಶ್ರಮದದೊಡಗೂಡಿದ ನಿರಂತರ ಹೋರಾಟ ಕೂಡಿಕೊಂಡಿರುತ್ತದೆ. ಎಲ್ಲರ ಜೀವನದಲ್ಲೂ ಸಾಕಷ್ಟು ಹೇರಳ ಅವಕಾಶಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಲಭಿಸಿರುತ್ತವೆ. ಕೆಲವರು ಅದನ್ನ ಸಮಯೋಚಿತವಾಗಿ ಗುರುತಿಸಿ, ಯೋಜಿತ ಕಾರ್ಯವೈಖರಿಯೊಂದಿಗೆ, ಸರ್ವಸ್ವವನ್ನು ಅರ್ಪಿಸಿ ಸಮರ್ಪಣಾ ಭಾವದೊಂದಿಗೆ ಸಾಧಿಸಿ ಗುರಿ ತಲುಪಿ ಎತ್ತರಕ್ಕೇರಿ ಅನುಕರಣೀಯವಾಗುತ್ತಾರೆ.
ಕೆಲವರು ಎಲ್ಲದರಲ್ಲೂ ತಪ್ಪುಗಳ ಹುಡುಕುತ್ತ, ಅಥವಾ ಅವಕಾಶಗಳ ಗುರುತಿಸುವಲ್ಲಿ ಸೋತು, ಸಿಕ್ಕಿದನ್ನ ದಕ್ಕಿಸಿಕೊಳ್ಳಲಾರದೆ, ಅವಕಾಶ ವಂಚಿತರಾಗಿ ಸಿಗದದ್ದಕ್ಕಾಗಿ ಕರುಬುತ್ತಾ, ಚಡಪಡಿಸಿ ಸೋಲಿನೊಂದಿಗೆ ರಾಜಿ ಮಾಡಿಕೊಳ್ಳುತ್ತ, ಅದಕ್ಕೆ ಪರರ ಹೊಣೆಮಾಡಿ ದೂಷಿಸುತ್ತಿರುತ್ತಾರೆ. ಅಂತಹ ನೂರಾರು ಜನಗಳ ಮಧ್ಯೆ ಶ್ರುತಿ ಮಧುಸೂದನ್ ರವರು ಅಕ್ಷರನಾದ ಸೋಷಿಯಲ್ ವೆಲ್ಫೇರ್ ಕ್ಲಬ್ (ರಿ.) ಕರ್ನಾಟಕ ವನ್ನು ಸ್ಥಾಪನೆ ಮಾಡಿ ಅದರಲ್ಲಿ ಅನೇಕ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುತ್ತಾರೆ.
ಅದರಲ್ಲೂ ಪ್ರತಿ ಸಲವೂ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಉತ್ತಮ ಅಂಕ ಗಳಿಸಿದವರಿಗೆ (ಡಿಸ್ಟಿಂಕ್ಷನ್ ಹೋಲ್ಡರ್ಸ್ ಅಂಡ್ ರಾಂಕ್ ಹೋಲ್ಡರ್ಸ್) ಅವರನ್ನು ಸನ್ಮಾನಿಸಿ ಅಭಿನಂದಿಸುವುದರ ಮುಖಾಂತರ ವಿದ್ಯಾರ್ಥಿಗಳಿಗೆ ಬ್ರೈಟ್ ಸ್ಟಾರ್ ಅವಾರ್ಡ್ ನೀಡಿ ಗೌರವಿಸಿದರು. ಈ ಸುಂದರ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಸಾರಾಂಶ್ ಡಿ (PUC ಡಿಸ್ಟಿಂಕ್ಷನ್ ಹೋಲ್ಡರ್) ಹಾಗೂ ಚರಿಷ್ಮ (PUC ಡಿಸ್ಟಿಂಕ್ಷನ್ ಹೋಲ್ಡರ್) ರವರನ್ನು ಬ್ರೈಟ್ ಸ್ಟಾರ್ ಅವಾರ್ಡ್ ನೀಡುವುದರ ಮೂಲಕ ಅಭಿನಂದಿಸಿ ಗೌರವಿಸಲಾಯಿತು.

