ಹೊಸ ಅಂಗಣ ಪತ್ರಿಕೆಯ ತಿಂಗಳ ಬೆಳಕು ಹಾಗೂ ಸಾಧಕರ ಗೌರವಾರ್ಪಣೆ ಕಾರ್ಯಕ್ರಮ

0
29

ಕಾರ್ಮಿಕರು ಶ್ರಮ ಹಾಗೂ ಪರೋಪಕಾರಿ ಜೀವನದ ಸಾಧಕರು : ಡಾ.ಹರಿಕೃಷ್ಣ ಪುನರೂರು

ಮುಲ್ಕಿ : ಕಾರ್ಮಿಕರು ದೇಶದ ರಾಯಭಾರಿಗಳು ಆಗಿದ್ದು ಕಠಿಣ ಶ್ರಮ ಹಾಗೂ ಪರೋಪಕಾರಿ ಜೀವನದ ಮೂಲಕ ಸಾಧಕರಾಗಿದ್ದಾರೆ. ಇಂತಹ ತೆರೆಯ ಮರೆಯಲ್ಲಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯವನ್ನು ಪ್ರತೀ ತಿಂಗಳು ಸಾಲ್ಯಾನ್ ರವರು ಮಾಡುತ್ತಿರುವುದು ಅಭಿನಂದನೀಯ ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

ಅವರು ಜೂ.30ರಂದು ಮುಲ್ಕಿ ಪುನರೂರು ಟೂರಿಸ್ಟ್ ಹೋಮ್ ನ ಸಭಾಗ್ರಹದಲ್ಲಿ ಹೊಸ ಅಂಗಣ ಮಾಸಪತ್ರಿಕೆಯ ತಿಂಗಳ ಬೆಳಕು ಹಾಗೂ ಸಾಧಕರ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅತಿಥಿ ತುಳು ವರ್ಲ್ಡ್ ಫೌಂಡೇಶನ್ ಇದರ ಅಧ್ಯಕ್ಷೆ ಭಾನುಮತಿ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿ ಮಹತ್ವದ ಕಾರ್ಯಕ್ರಮದ ಆಯೋಜನಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜುಲೈ ತಿಂಗಳ ಹೊಸ ಅಂಗಣ ಮಾಸಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು ಹಾಗೂ ಸ್ನೇಹ ಜೀವಿ, ಪರೋಪಕಾರಿ ಪೇಯಿಂಟರ್ ವೃತ್ತಿಯ ಗೇರುಕಟ್ಟೆ ಸಲ್ವಡೋ ಡಿ’ಸೋಜಾರವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಸುರೇಂದ್ರ ಜಿ.ಶೆಣೈ ಮುಲ್ಕಿ, ಯುವವಾಹಿನಿ ಘಟಕದ ಅಧ್ಯಕ್ಷೆ ಚರಿಶ್ಮ ಶ್ರೀನಿವಾಸ್, ಕಕ್ವ ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಹಬೀಬುಲ್ಲ, ಸರೋಜಿನಿ ಸುವರ್ಣ, ಶಶಿ ಅಮೀನ್ ಗೇರುಕಟ್ಟೆ,ವಿಜಯ ಹರಿಶ್ಚಂದ್ರ ಸಾಲ್ಯಾನ್, ಸಾಧು ಅಂಚನ್ ಉಪಸ್ಥಿತರಿದ್ದರು.

ಹೊಸ ಅಂಗಣ ಪತ್ರಿಕೆಯ ಸಂಪಾದಕ ಹರಿಶ್ಚಂದ್ರ ಪಿ. ಸಾಲ್ಯಾನ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು.ವಾಸು ಪೂಜಾರಿ ಚಿತ್ರಾಪು ವಂದಿಸಿದರು.ಕಾರ್ಯಕ್ರಮವನ್ನು ದಿನೇಶ್ ಕೋಲ್ನಾಡು ನಿರೂಪಿಸಿದರು.

LEAVE A REPLY

Please enter your comment!
Please enter your name here