ಉಡುಪಿ : ರೋಟರಿ ಅಂಬಲಪಾಡಿ 25 ನೇ ವರ್ಷದ ರಜತ ಮೋಹೋತ್ಸವದ ಸಮಾರೋಪ ಹಾಗೂ ಪದಗ್ರಹಣ ಸಮಾರಂಭ ಉಡುಪಿ ಪುರ ಭವನದಲ್ಲಿ 25 ರಂದು ಜರಗಿತು , ಸಮಾರಂಭದ ಮುಖ್ಯ ಅತಿಥಿಯಾದ ರೋ . ಪಿ ಡಿ ಜಿ ಆರ್ ಕೃಷ್ಣರವರು ದೀಪ ಬೆಳಗಿಸಿ ಪದ ಪ್ರಧಾನ ನೆರವೇರಿಸಿದರು , ವಿವಿಧ ಜನಸೇವೆಯ ಮೂಲಕ ಜನ ಮನ ಗೆದ್ದ ರೋಟರಿ ಸಂಸ್ಥೆ 25 ವರ್ಷ ಪೂರ್ಣ ಗೊಂಡ ಸಮಯದಲ್ಲಿ ಸ್ವಂತ ಕಟ್ಟಡಕ್ಕೆ ಜಾಗ ಖರೀದಿ ಮಾಡಲು 25 ಲಕ್ಷ ಚೆಕ್ ವಿತರಣೆ , ಆರ್ಥಿಕ ನೆರವು , ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ರೋಟರಿ ಅಂಬಲಪಾಡಿ ಯಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಅಧ್ಯಕ್ಷರಗಳಿಗೆ ಗೌರವಾರ್ಪಣೆ ಮಾಡಿ ಮುಂದೆ ಸಹ ಸಮುದಾಯದ ಜನ ಸೇವೆ ನಿರಂತರ ನೆಡೆಯಲಿ ಶುಭ ಹಾರೈಸಿದರು .
ವೇದಿಕೆಯಲ್ಲಿ ರೋ . ಪಿ ಡಿ ಜಿ ಮೇಜರ್ ಡೋನರ್ ಬಿ ರಾಜಾರಾಮ್ ಭಟ್ , ಸಹಾಯಕ ಗವರ್ನರ್ ರೋ . ಆನಂದ್ ಶೆಟ್ಟಿ , ಈ ವರ್ಷದ ನೂತನ ಸಹಾಯಕ ಗವರ್ನರ್ ರೋ . ವಿಜಯ್ ಕುಮಾರ್ ಶೆಟ್ಟಿ , ವಲಯ ಸೇನಾನಿ ರೋ . ರವಿರಾಜ್ ಕಿದಿಯೂರು , ಈ ಸಾಲಿನ ವಲಯ ಸೇನಾನಿ ರೋ . ದೀಪಕ್ ಕಿರಣ್ , ರಜತಮೋಹೋತ್ಸವ ಸಮಿತಿಯ ಅಧ್ಯಕ್ಷ ರೋ . ಜಯಪ್ರಕಾಶ್ ಕೆದ್ಲಾಯ , ರಜತಮೋಹೋತ್ಸವ ಸಮಿತಿಯ ಕಾರ್ಯದರ್ಶಿ ಅಶೋಕ್ ಶೆಟ್ಟಿ , 25 , 26 ,ಸಾಲಿನ ಅಧ್ಯಕ್ಷರಾದ ನವೀನ ಚಂದ್ರ ಸಾಲಿಯನ್ , ಕಾರ್ಯದರ್ಶಿ ರಾಜೇಶ್ ಕರ್ಕೇರ , ಈ ಸಾಲಿನ ನೂತನ ಅಧ್ಯಕ್ಷ ಪ್ರಮೋದ್ ರೈ , ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥರಿದ್ದರು.
ನವೀನ ಚಂದ್ರ ಸಾಲಿಯನ್ ಸ್ವಾಗತಿಸಿ , ಕಾರ್ಯಕ್ರಮ ನಿರೊಪಣೆ ಮೋಹನ್ ದಾಸ್ ಪೈ ಮತ್ತು ಶ್ರೀಶ್ ಆಚಾರ್ಯ ನೆಡೆಸಿಕೊಟ್ಟರು , ಅಶೋಕ್ ಶೆಟ್ಟಿ ವಂದಿಸಿದರು , ರೋಟರಿ ಮಿತ್ರರಿಂದ ಮನೋರಂಜನಾ ಕಾರ್ಯಕ್ರಮ ಜರಗಿತು.

