ರೋಟರಿ ಅಂಬಲಪಾಡಿ ರಜತ ಮೋಹೋತ್ಸವದ ಸಮಾರೋಪ ಹಾಗೂ ಪದಗ್ರಹಣ ಸಮಾರಂಭ

0
4

ಉಡುಪಿ : ರೋಟರಿ ಅಂಬಲಪಾಡಿ 25 ನೇ  ವರ್ಷದ  ರಜತ ಮೋಹೋತ್ಸವದ ಸಮಾರೋಪ  ಹಾಗೂ ಪದಗ್ರಹಣ ಸಮಾರಂಭ ಉಡುಪಿ  ಪುರ ಭವನದಲ್ಲಿ 25 ರಂದು  ಜರಗಿತು , ಸಮಾರಂಭದ  ಮುಖ್ಯ ಅತಿಥಿಯಾದ  ರೋ . ಪಿ ಡಿ ಜಿ ಆರ್ ಕೃಷ್ಣರವರು ದೀಪ ಬೆಳಗಿಸಿ  ಪದ ಪ್ರಧಾನ  ನೆರವೇರಿಸಿದರು , ವಿವಿಧ  ಜನಸೇವೆಯ ಮೂಲಕ ಜನ ಮನ ಗೆದ್ದ ರೋಟರಿ ಸಂಸ್ಥೆ  25 ವರ್ಷ ಪೂರ್ಣ ಗೊಂಡ ಸಮಯದಲ್ಲಿ ಸ್ವಂತ ಕಟ್ಟಡಕ್ಕೆ ಜಾಗ ಖರೀದಿ ಮಾಡಲು   25 ಲಕ್ಷ ಚೆಕ್ ವಿತರಣೆ  ,  ಆರ್ಥಿಕ  ನೆರವು  , ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ  ಹಾಗೂ    ರೋಟರಿ ಅಂಬಲಪಾಡಿ ಯಲ್ಲಿ   ಸೇವೆ ಸಲ್ಲಿಸಿದ  ಎಲ್ಲಾ ಅಧ್ಯಕ್ಷರಗಳಿಗೆ  ಗೌರವಾರ್ಪಣೆ ಮಾಡಿ ಮುಂದೆ ಸಹ  ಸಮುದಾಯದ ಜನ ಸೇವೆ ನಿರಂತರ ನೆಡೆಯಲಿ ಶುಭ ಹಾರೈಸಿದರು .  

                                                                                                                                                                                                                                       ವೇದಿಕೆಯಲ್ಲಿ ರೋ .   ಪಿ ಡಿ ಜಿ  ಮೇಜರ್ ಡೋನರ್ ಬಿ  ರಾಜಾರಾಮ್ ಭಟ್  , ಸಹಾಯಕ ಗವರ್ನರ್  ರೋ  . ಆನಂದ್ ಶೆಟ್ಟಿ  ,  ಈ  ವರ್ಷದ ನೂತನ    ಸಹಾಯಕ ಗವರ್ನರ್  ರೋ . ವಿಜಯ್ ಕುಮಾರ್ ಶೆಟ್ಟಿ  , ವಲಯ ಸೇನಾನಿ ರೋ . ರವಿರಾಜ್ ಕಿದಿಯೂರು , ಈ ಸಾಲಿನ  ವಲಯ ಸೇನಾನಿ    ರೋ . ದೀಪಕ್ ಕಿರಣ್ , ರಜತಮೋಹೋತ್ಸವ ಸಮಿತಿಯ  ಅಧ್ಯಕ್ಷ ರೋ . ಜಯಪ್ರಕಾಶ್ ಕೆದ್ಲಾಯ ,   ರಜತಮೋಹೋತ್ಸವ ಸಮಿತಿಯ  ಕಾರ್ಯದರ್ಶಿ ಅಶೋಕ್ ಶೆಟ್ಟಿ  , 25 , 26 ,ಸಾಲಿನ ಅಧ್ಯಕ್ಷರಾದ ನವೀನ ಚಂದ್ರ ಸಾಲಿಯನ್ , ಕಾರ್ಯದರ್ಶಿ ರಾಜೇಶ್ ಕರ್ಕೇರ , ಈ  ಸಾಲಿನ ನೂತನ ಅಧ್ಯಕ್ಷ ಪ್ರಮೋದ್ ರೈ   , ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ ಹಾಗೂ  ಪದಾಧಿಕಾರಿಗಳು ಉಪಸ್ಥರಿದ್ದರು.

 ನವೀನ ಚಂದ್ರ ಸಾಲಿಯನ್  ಸ್ವಾಗತಿಸಿ  ,  ಕಾರ್ಯಕ್ರಮ ನಿರೊಪಣೆ ಮೋಹನ್ ದಾಸ್ ಪೈ  ಮತ್ತು ಶ್ರೀಶ್ ಆಚಾರ್ಯ ನೆಡೆಸಿಕೊಟ್ಟರು , ಅಶೋಕ್ ಶೆಟ್ಟಿ ವಂದಿಸಿದರು  , ರೋಟರಿ ಮಿತ್ರರಿಂದ ಮನೋರಂಜನಾ ಕಾರ್ಯಕ್ರಮ ಜರಗಿತು.                   

LEAVE A REPLY

Please enter your comment!
Please enter your name here